ನಾಳೆಯಿಂದ ಹಂಪಿ ಸ್ಮಾರಕಗಳ ವೀಕ್ಷಣೆ ಬಂದ್; ಭಾರತೀಯ ಪುರಾತತ್ವ ಇಲಾಖೆ ಆದೇಶ-ಕಹಳೆ ನ್ಯೂಸ್
ಬಳ್ಳಾರಿ : ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂದಿನ ತಿಂಗಳು ಮೇ 15 ವರೆಗೆ ಹಂಪಿಯ ಸ್ಮಾರಕಗಳ ವೀಕ್ಷಣೆಯನ್ನು ಬಂದ್ ಮಾಡಲು ಭಾರತೀಯ ಪುರಾತತ್ವ ಇಲಾಖೆ ಆದೇಶಿಸಿದೆ. ಈ ಕುರಿತು ಇಲಾಖೆಯ ಸ್ಮಾರಕಗಳ ನಿರ್ದೇಶಕ ಎನ್.ಕೆ.ಪಾಠಕ್ ಇಂದು ಆದೇಶ ಹೊರಡಿಸಿದ್ದಾರೆ. ಹಂಪಿ ಅಷ್ಟೇ ಅಲ್ಲದೆ ದೇಶದಲ್ಲಿರುವ ಎಲ್ಲಾ ಭಾರತೀಯ ಪುರಾತತ್ವ ಇಲಾಖೆಯಡಿ ಬರುವ ಸ್ಮಾರಕಗಳು ಮತ್ತು ಮ್ಯೂಸಿಯಂ ಗಳ ಪ್ರವೇಶ ಬಂದ್ ಮಾಡಲು ಆದೇಶಿಸಿದ್ದಾರೆ. ಇದರಿಂದ ಹಂಪಿಯ ವಿರೂಪಾಕ್ಷ...