ರಾಜ್ಯದಲೇ ಮೊದಲ ಬಾರಿಗೆ ಶವ ಸಂಸ್ಕಾರಕ್ಕೆ ಬಯೋಗ್ಯಾಸ್ ಬಳಕೆ -ಕಹಳೆ ನ್ಯೂಸ್
ಮೈಸೂರು: ನಗರದಲ್ಲಿ ಸಂಗ್ರಹವಾಗುವ ಹಸಿಕಸದಿಂದ ಬಯೋಗ್ಯಾಸ್ ತಯಾರಿಸಿ ಅದನ್ನು ಶವಗಳ ಅಂತ್ಯ ಸಂಸ್ಕಾರಕ್ಕೆ ಬಳಸಿಕೊಳ್ಳುವ ವಿನೂತನ ಯೋಜನೆಯನ್ನು ಮಹಾನಗರ ಪಾಲಿಕೆಯು ಸಿದ್ಧಗೊಳಿಸಿದ್ದು, ಇದು ಇಡೀ ರಾಜ್ಯಕ್ಕೆ ಪ್ರಥಮವಾಗಿದೆ. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ 98 ಲಕ್ಷ ರೂ. ವೆಚ್ಚದಲ್ಲಿ ಬಯೋಗ್ಯಾಸ್ ಪ್ಲಾಂಟ್ ಸ್ಥಾಪನೆ ಮಾಡಲಾಗಿದ್ದು, ಇಲ್ಲಿ ತಯರಾಗುವ ಗ್ಯಾಸ್‌ನಿಂದ ಶವ ಸುಡುವ ಕಾರ್ಯ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಹರಿಶ್ಚಂದ್ರ ಘಾಟ್‌ನಲ್ಲಿ ಇರುವ ಅನಿಲ ಚಿತಾಗಾರದಲ್ಲಿ ಪ್ರಸ್ತುತ ವಾಣಿಜ್ಯ ಬಳಕೆಯ...