Sunday, January 19, 2025

ಮೈಸೂರು

ಮೈಸೂರು

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ; ಮೂವರು ಯುವಕರ ದುರ್ಮರಣ-ಕಹಳೆ ನ್ಯೂಸ್

ಮೈಸೂರು : ತಿ.ನರಸೀಪುರ ತಾಲೂಕಿನ ನೆರಗ್ಯಾತನಹಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಈ ಘಟನೆಯಲ್ಲಿ ತಿ.ನರಸೀಪುರ ತಾಲೂಕಿನ ಹಸುವಟ್ಟಿ ಗ್ರಾಮದ 26 ವರ್ಷದ ಸುರೇಶ್, 25 ವರ್ಷದ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಅಜಯ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಈ ಕುರಿತು ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ...
ಮೈಸೂರು

ಓಡಾಡಿಸಿಕೊಂಡು ಬೈಕ್ ಹಿಡಿಯಿರಿ ಅಂತ ಕಾನೂನು ಎಲ್ಲಿದೆ.? ಬೈಕ್ ಸವಾರನನ್ನು ಸಾಯಿಸಿದ್ದಕ್ಕೆ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತೀಯಾ.? ನೀನ್ ಯಾವ್ ಸೀಮೆ ಕಮಿಷನರಯ್ಯಾ.? ಥೂ ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು ; ಎಂಎಲ್ಸಿ ಹೆಚ್ ವಿಶ್ವನಾಥ್ ಕಿಡಿ-ಕಹಳೆ ನ್ಯೂಸ್

ಮೈಸೂರು : ಮೂರ್ನಾಲ್ಕು ದಿನಗಳ ಹಿಂದೆ ಮೈಸೂರಿನ ರಿಂಗ ರಸ್ತೆಯಲ್ಲಿ ಪೊಲೀಸರ ಅಚಾತುರ್ಯದಿಂದ ನಡೆದ ಘಟನೆಯ ಬಗ್ಗೆ ಎಂಎಲ್ಸಿ ಹೆಚ್ ವಿಶ್ವನಾಥ್ ಅವರು, ಓಡಾಡಿಸಿಕೊಂಡು ಬೈಕ್ ಹಿಡಿಯಿರಿ ಅಂತ ಕಾನೂನು ಎಲ್ಲಿದೆ.? ಬೈಕ್ ಸವಾರನನ್ನು ಸಾಯಿಸಿದ್ದಕ್ಕೆ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತೀಯಾ.? ನೀನ್ ಯಾವ್ ಸೀಮೆ ಕಮಿಷನರಯ್ಯಾ.? ಥೂ ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು ಎಂಬುದಾಗಿ ಪೊಲೀಸ್ ಕಮೀಷನರ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪೊಲೀಸ್...
ಮೈಸೂರು

ರಾಸಲೀಲೆ ಸಿಡಿ 5 ಕೋಟಿಗೆ ಡೀಲ್, ಬ್ಲ್ಯಾಕ್‍ಮೇಲ್ ಮಾಡುವವರನ್ನು ಒದ್ದು ಜೈಲಿಗೆ ಹಾಕಿ; ಹೆಚ್.ಡಿ.ಕುಮಾರಸ್ವಾಮಿ-ಕಹಳೆ ನ್ಯೂಸ್

ಮೈಸೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಕೋಟಿ.ರೂ. ಡೀಲ್ ನಡೆದಿರುವ ವಿಚಾರದ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ. ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಈ ಡೀಲ್ ವ್ಯವಹಾರವು ಕಳೆದ ಮೂರು ತಿಂಗಳಿನಿಂದ ನಡೆದಿದ್ದು, ಇದರಲ್ಲಿ ದೊಡ್ಡವರ ಕೈವಾಡವಿದೆ. ಈ ವಿಚಾರದ ಬಗ್ಗೆ ಸೂಕ್ತವಾದ ತನಿಖೆ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರದ ಪತನಕ್ಕೆ ಕಾರಣರಾದವರು ಎಂದು ನಾನು ದ್ವೇಷ...
ಮೈಸೂರು

ರಮೇಶ್ ಜಾರಕಿಹೊಳಿ ಸಿಡಿಯ ಹಿಂದೆ ದೊಡ್ಡ ವ್ಯಕ್ತಿಗಳಿದ್ದಾರೆ; ಟ್ವಿಸ್ಟ್ ನೀಡಿದ ಕುಮಾರಸ್ವಾಮಿ-ಕಹಳೆ ನ್ಯೂಸ್

ಮೈಸೂರು : ರಮೇಶ್ ಜಾರಕಿಹೊಳಿ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಟ್ವಿಸ್ಟ್ ನೀಡಿದ್ದು, ರಮೇಶ್ ಜಾರಕಿಹೊಳಿ ಸಿಡಿಗೆ ಸಂಬಂಧಿಸಿದಂತೆ ಕಳೆದ 3 ತಿಂಗಳಿನಿಂದ ಡೀಲ್ ನಡೆದಿದೆ. 5 ಕೋಟಿ ರೂಪಾಯಿ ಡೀಲ್ ನಡೆದಿದ್ದು, ಈ ಕೇಸ್ ನಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ ಎಂದು ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಯನ್ನು ಮಂತ್ರಿಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು ಈ ಸಿಡಿಯ ಮುಖ್ಯ...
ಮೈಸೂರು

ತಮ್ಮನ ಆತ್ಮಹತ್ಯೆಯ ಸುದ್ದಿ ಕೇಳಿ ತಾನೂ ಆತ್ಮಹತ್ಯೆಗೆ ಶರಣಾದ ಅಣ್ಣ! ಇಬ್ಬರು ಪುತ್ರರನ್ನು ಕಳೆದುಕೊಂಡ ಪೋಷಕರು-ಕಹಳೆ ನ್ಯೂಸ್‍

ಮೈಸೂರು : ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ತಮ್ಮನ ಆತ್ಮಹತ್ಯೆಯ ಸುದ್ದಿ ಕೇಳಿ ಅಣ್ಣ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಇದೀಗ ಕುಟುಂಬಸ್ಥರು ಅಣ್ಣ-ತಮ್ಮಂದಿರನ್ನು ಅಕ್ಕ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. 28 ವರ್ಷದ ವೆಂಕಟೇಶ್ ಮತ್ತು 26 ವರ್ಷದ ಹರೀಶ್ ಮೃತ ಸಹೋದರರಾಗಿದ್ದು, ರೈತ ಕುಟುಂಬವಾಗಿದ್ದರಿಂದ ಹರೀಶ್ ವಿಪರೀತ ವೇಗದಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಚಿನ್ಮಯಿ ಗೌಡ ಹಾಗೂ ಅಣ್ಣ ವೆಂಕಟೇಶ್ ಕೂಡ...
ಮೈಸೂರು

ನಾನು ದೇವಾಲಯಗಳಿಗೆ ಹೋಗುವುದು ಕಡಿಮೆ, ಕಷ್ಟದ ಸಂದರ್ಭ ಸ್ಪಂದಿಸುವುದರಲ್ಲಿ ದೇವರಿದ್ದಾನೆ ; ಸಿದ್ದರಾಮಯ್ಯ-ಕಹಳೆ ನ್ಯೂಸ್

ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಾನು ದೇವಾಲಯಗಳಿಗೆ ಹೋಗುವುದು ಕಡಿಮೆ. ಕಷ್ಟದ ಸಂದರ್ಭ ಸ್ಪಂದಿಸುವುದರಲ್ಲಿ ದೇವರಿದ್ದಾನೆ ಎಂದು ಹೇಳಿದ್ದಾರೆ. ಟಿ.ನರಸೀಪುರದಲ್ಲಿ ಸಾರ್ವಜನಿಕರನ್ನುದ್ದೇಶೀಸಿ ಮಾತನಾಡಿದ ಅವರು, ನಾನು ದೇವಾಲಯಗಳಿಗೆ ಹೋಗುವುದು ಕಡಿಮೆ. ಮನೆಯಲ್ಲಿ ಪೂಜೆ ಮಾಡುವುದಿಲ್ಲ. ಹಾಗೆಂದು ದೇವರು ಇಲ್ಲ ಎಂದಲ್ಲ. ಕಷ್ಟ ಕಾಲದಲ್ಲಿ ದೇವರು ಸ್ಪಂದಿಸುತ್ತಾನೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಪೂಜಾರಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲ ಪೂಜಾರಿಗಳು ತಟ್ಟೆ ಕಾಸಿಗಾಗಿ ಕಾಯುತ್ತಿರುತ್ತಾರೆ. ಪೂಜೆಯ ವೇಳೆಯಲ್ಲಿ...
ಮೈಸೂರು

ಹಳೆ ಲವರ್ ಮೇಲಿನ ಆಸೆಯಿಂದ ತುಂಬು ಗರ್ಭಿಣಿ ಪತ್ನಿಯ ಕೆನ್ನೆಗೆ ಹೊಡೆದು, ಕೊಲೆಗೈದ ಪತಿ-ಕಹಳೆ ನ್ಯೂಸ್

ಮೈಸೂರು : ಮೈಸೂರಿನಲ್ಲಿ ಹಳೆ ಲವರ್ ಮೇಲಿನ ಆಸೆಯಿಂದ ತುಂಬು ಗರ್ಭಿಣಿ ಪತ್ನಿಯ ಕೆನ್ನೆಗೆ ಪತಿರಾಯ ಹೊಡೆದು, ಬಳಿಕ ಆಕೆಯನ್ನು ಕೊಲೆಗೈದ ಘಟನೆ ನಡೆದಿದೆ. ಕೊಲೆಯಾದ ದುರ್ದೈವಿ ಜಯನಗರದ ಚಿನ್ನಗಿರಿ ಕೊಪ್ಪಲಿನ 19 ವರ್ಷದ ಕೀರ್ತನಾ ಎಂದು ತಿಳಿದುಬಂದಿದೆ. ಪತಿ ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಾಘವೇಂದ್ರ, ಸುಂದರಿ ಎಂಬ ಮಹಿಳೆಯೊಂದಿಗೆ 5 ವರ್ಷದಿಂದ ಸಂಬಂಧ ಹೊಂದಿದ್ದ. ಅಲ್ಲದೇ ಕಳೆದ ಒಂದು ವರ್ಷದ ಹಿಂದೆ ಚಾಮರಾಜನಗರ ಮೂಲದ ಕೀರ್ತನಾಳನ್ನು ವಿವಾಹವಾಗಿದ್ದು,...
ಮೈಸೂರು

ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಆನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರ ಸಾವು-ಕಹಳೆ ನ್ಯೂಸ್

ಮೈಸೂರು : ಕಾಡುಪ್ರಾಣಿಗಳ ಉಪಟಳವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಆನೆ ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೇರಳದ 45 ವರ್ಷದ ಜೋಯಿ ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ಜಮೀನೊಂದನ್ನು ಗುತ್ತಿಗೆಗೆ ಪಡೆದು ಶುಂಠಿ ಬೇಸಾಯ ಮಾಡುತ್ತಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಚಿಟಿ ಸಲಗ ದಾಳಿ ನಡೆಸಿ, ಸೊಂಡಿಲಿನಿಂದ ಎತ್ತಿ ಹಳ್ಳಕ್ಕೆ ಬಿಸಾಡಿದೆ. ಇದರಿಂದ ಗಾಯಗೊಂಡ...
1 8 9 10 11
Page 10 of 11