ರಾಸಲೀಲೆ ಸಿಡಿ 5 ಕೋಟಿಗೆ ಡೀಲ್, ಬ್ಲ್ಯಾಕ್‍ಮೇಲ್ ಮಾಡುವವರನ್ನು ಒದ್ದು ಜೈಲಿಗೆ ಹಾಕಿ; ಹೆಚ್.ಡಿ.ಕುಮಾರಸ್ವಾಮಿ-ಕಹಳೆ ನ್ಯೂಸ್
ಮೈಸೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಕೋಟಿ.ರೂ. ಡೀಲ್ ನಡೆದಿರುವ ವಿಚಾರದ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ. ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಈ ಡೀಲ್ ವ್ಯವಹಾರವು ಕಳೆದ ಮೂರು ತಿಂಗಳಿನಿಂದ ನಡೆದಿದ್ದು, ಇದರಲ್ಲಿ ದೊಡ್ಡವರ ಕೈವಾಡವಿದೆ. ಈ ವಿಚಾರದ ಬಗ್ಗೆ ಸೂಕ್ತವಾದ ತನಿಖೆ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರದ ಪತನಕ್ಕೆ ಕಾರಣರಾದವರು ಎಂದು ನಾನು ದ್ವೇಷ...