ಲಿಫ್ಟ್ ಒಳಗೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ವೈದ್ಯ ಅಮಾನತು – ಕಹಳೆ ನ್ಯೂಸ್
ಹಾಸನ: ವೈದ್ಯ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆಸ್ಪತ್ರೆಯ ವೈದ್ಯರೊಬ್ಬರನ್ನು ಅಮಾನತು ಮಾಡಿದ ಘಟನೆ ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 12 ರಂದು ವೈದ್ಯ ವಿದ್ಯಾರ್ಥಿಯೋರ್ವಳು ಲಿಫ್ಟ್ ನಲ್ಲಿ ಹೋಗುವಾಗ ವಿದ್ಯಾರ್ಥಿನಿಯನ್ನು ತಬ್ಬಿಕೊಂಡ ಆರೋಪಿ ವೈದ್ಯ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಕುರಿತು ಎಚ್‍ಒಡಿಗೆ ವಿದ್ಯಾರ್ಥಿನಿ ದೂರು ನೀಡಿದ್ದಳು. ಅದರಂತೆ ಆರೋಪಿ ವೈದ್ಯನನ್ನು ಅಮಾನತು ಮಾಡಲಾಗಿದೆ. ಇದೀಗ ವಿಶೇಷ ತಂಡ ರಚಿಸಿ ಘಟನೆ ಕುರಿತು ತನಿಖೆ...