ಅರಬ್ಬೀ ಸಮುದ್ರದ ಲೈಟ್ ಹೌಸ್ ಬಳಿ ಮಲ್ಪೆ ಬೋಟ್ ಮುಳುಗಡೆ : ಮೀನುಗಾರರನ್ನು ರಕ್ಷಿಸಿದ ಸ್ಥಳೀಯರು – ಕಹಳೆ ನ್ಯೂಸ್
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಲ್ಪೆ ಮೂಲದ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿ ನೀರು ನುಗ್ಗಿ ಬೋಟ್ ಮುಳುಗಿದ್ದು, 8 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಬ್ಬೀ ಸಮುದ್ರದ 9 ನಾಟಿಕಲ್ ಮೈಲು ದೂರದ ಲೈಟ್ ಹೌಸ್ ಬಳಿ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಬೋಟ್ ಒಂದು ಮುಳಗಡೆಯಾಗಿದೆ. ಇನ್ನು ಮುಳಗಡೆ ಆಗುವ ದೃಶ್ಯಗಳನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಎಂದಿನಂತೆ ಮೀನು ಹಿಡಿಯಲು ತೆರಳಿದ್ದ...