Saturday, January 18, 2025

ಬೆಳಗಾವಿ

ಬೆಳಗಾವಿಸುದ್ದಿ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೇಟಿಯಾಗಿ ಆರೋಗ್ಯ ವಿಚಾರಿಸಿದ ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ – ಕಹಳೆ ನ್ಯೂಸ್

ಬೆಳಗಾವಿ: ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಬೆಳಗಾವಿಯ ವಿಜಯಾ ಆಸ್ಪತ್ರೆಗೆ ಭೇಟಿ ನೀಡಿ, ರಸ್ತೆ ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆರೋಗ್ಯ ಕುರಿತು ಮಾಹಿತಿ ಪಡೆದರು. ಇದೇ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಆಸ್ಪತ್ರೆಗೆ ತೆರಳಿ ಲಕ್ಷ್ಮೀ ಹೆಬ್ಬಾಳಕರ್ ಅವರ ಅರೋಗ್ಯ ವಿಚಾರಿಸಿದರು....
ಬೆಳಗಾವಿರಾಜ್ಯಸುದ್ದಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ : ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಸಚಿವೆ ಹಾಗೂ ಎಂಎಲ್‌ಸಿ ಚೆನ್ನರಾಜ ಹಟ್ಟಿಹೊಳಿ – ಕಹಳೆ ನ್ಯೂಸ್

ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಎಂಎಲ್‌ಸಿ ಚೆನ್ನರಾಜ ಹಟ್ಟಿಹೊಳಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ರಸ್ತೆಯಲ್ಲಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸಿಎಲ್‌ಪಿ ಸಭೆ ಮುಗಿಸಿ ನಿನ್ನೆ ತಡರಾತ್ರಿ ಬೆಂಗಳೂರಿನಿAದ ಬೆಳಗಾವಿಗೆ ಹೊರಟ್ಟಿದ್ದ ಲಕ್ಷ್ಮೀ ಹೆಬ್ಬಾಳಕರ್ ರಸ್ತೆ ಮಾರ್ಗದ ಮೂಲಕ ಬರುತ್ತಿದ್ದರು. ಅಂಬಡಗಟ್ಟಿ...
ಕ್ರೈಮ್ಬೆಳಗಾವಿರಾಜಕೀಯರಾಜ್ಯಸುದ್ದಿ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪ ಎಂಎಲ್‌ಸಿ ಸಿ.ಟಿ.ರವಿ ಬಂಧನ – ಕಹಳೆ ನ್ಯೂಸ್

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸಿ.ಟಿ.ರವಿ ಅವರನ್ನು ಬಂಧಿಸಿದ ಹಿರೇಬಾಗೇವಾಡಿ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಂಧನ ಖಂಡಿಸಿ ಪೊಲೀಸ್ ವ್ಯಾನ್ ಹತ್ತಿ ಬಿಜೆಪಿ ಶಾಸಕರು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು....
ಬೆಳಗಾವಿರಾಜಕೀಯರಾಜ್ಯಸುದ್ದಿ

ಬೋರ್‌ವೆಲ್‌ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ, ದಂಡ ; ಬೆಳಗಾವಿ ಅಧಿವೇಶನದಲ್ಲಿ ಬಿಲ್ ಪಾಸ್ – ಕಹಳೆ ನ್ಯೂಸ್

ಬೆಳಗಾವಿ, ಡಿ.17 : ಕಾರ್ಯನಿರ್ವಹಿಸದ ಅಥವಾ ಸ್ಥಗಿತಗೊಂಡ ಕೊಳವೆಬಾವಿ ಮುಚ್ಚದ ಜಮೀನು ಮಾಲೀಕರಿಗೆ 1 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸುವ ತಿದ್ದುಪಡಿ ವಿಧೇಯಕ ಸೇರಿದಂತೆ ಬೆಳಗಾವಿ ಸುರ್ವಣಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ 8 ವಿಧೇಯಕಗಳನ್ನು ಅಂಗೀಕರಿಸಲಾಯಿತು. ವಿಫಲ ಕೊಳವೆಬಾವಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚದೆ ದುರಂತಕ್ಕೆ ಕಾರಣರಾಗುವವರನ್ನು ಶಿಕ್ಷಿಸಲು ಸಚಿವ ಎನ್.ಎಸ್.ಬೋಸರಾಜು ಅವರು ಮಂಡಿಸಿದ, ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ, ನಿವರ್ಹಣಾ ನಿಯಂತ್ರಣ) ತಿದ್ದುಪಡಿ ವಿಧೇಯಕ-2024...
ಬೆಳಗಾವಿಸಂತಾಪಸುದ್ದಿ

ಜಮಖಂಡಿ ಓಲೆಮಠದ ಅಭಿನವ ಕುಮಾರ ಚೆನ್ನಬಸವ ಸ್ವಾಮಿಗಳು ಹೃದಯಾಘಾತದಿಂದ ಲಿಂಗೈಕ್ಯ – ಕಹಳೆ ನ್ಯೂಸ್

ಬಾಗಲಕೋಟೆ: ಜಮಖಂಡಿ ತಾಲೂಕಿನ ಮಠದ ಶ್ರೀ ಡಾ.ಅಭಿನವ ಕುಮಾರ ಚೆನ್ನಬಸವ ಮಹಾಸ್ವಾಮಿಗಳು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಸ್ವಾಮೀಜಿಗಳು ಶುಗರ್, ಬಿಪಿ, ಹೃದಯ ಸಮಸ್ಯೆಯಿಂದ ಕಳೆದ ಎರಡು ವರ್ಷದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ 9:30 ಕ್ಕೆ ಜೀವ ತ್ಯಜಿಸಿದ್ದಾರೆ. ಸವದತ್ತಿಯ ಗೊರವಿನಕೊಳ್ಳದ ಓಲೆ‌ಮಠದ ಶಾಖಾಮಠದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ 9:30 ರ ನಂತರ ಗೊರವಿನಕೊಳ್ಳ ಸವದತ್ತಿಯಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ. ನಂತರ ಬೆಳಗ್ಗೆ 11 ಕ್ಕೆ ಜಮಖಂಡಿಗೆ ಸಾಗಿಸಲಾಗುವುದು. ಓಲೆಮಠದ ಆವರಣದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ...
ಬೆಂಗಳೂರುಬೆಳಗಾವಿರಾಜಕೀಯರಾಜ್ಯಸುದ್ದಿ

ದಸರಾದಲ್ಲಿ ಮುಸ್ಲಿಂರ ಬಳಿ ವ್ಯಾಪಾರ ಮಾಡಬೇಡಿ : ಪ್ರಕಟಣೆ ಹೊರಡಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ – ಕಹಳೆ ನ್ಯೂಸ್

ವಿಜಯಪುರ:- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ದಸರಾದಲ್ಲಿ ಮುಸ್ಲಿಂರ ಬಳಿ ವ್ಯಾಪಾರ ಮಾಡಬೇಡಿ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಹಣೆಗೆ ಕುಂಕುಮ ಹಚ್ಚಿಕೊಂಡು ವ್ಯಾಪಾರ ಮಾಡುವ ಹಿಂದೂಗಳ ಹತ್ತಿರವೇ ಪೂಜಾ ಸಾಮಾಗ್ರಿಗಳನ್ನು ಖರೀದಿಸುವುದರಿಂದ, ನಮ್ಮ ಹಬ್ಬಗಳ ಪಾವಿತ್ರ್ಯತೆ ಕಾಪಾಡಿಕೊಂಡು, ಮಡಿವಂತಿಕೆಯಿಂದ ಧರ್ಮಾನುಸಾರವಾಗಿ ನಡೆದುಕೊಳ್ಳುವ ಜೊತೆಗೆ ಭಗವಂತನ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ.   ಪವಿತ್ರ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲದ, ಹಿಂದೂ ದೇವರನ್ನು ನಂಬದ, ಹಿಂದೂಗಳನ್ನು ವಿರೋಧಿಸುವರು ಅಲ್ಲಿಯೇ ತಮ್ಮ...
ಬೆಂಗಳೂರುಬೆಳಗಾವಿರಾಜಕೀಯರಾಜ್ಯಸುದ್ದಿ

ನಾನು ಸಿಎಂ ಆದ್ರೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೊದಲೇ ಗುಂಡು ಹಾಕ್ತೀನಿ : ಯತ್ನಾಳ್​ – ಕಹಳೆ ನ್ಯೂಸ್

ಬೆಳಗಾವಿ, ಸೆಪ್ಟೆಂಬರ್​ 28: ನಾನು ಮುಖ್ಯಮಂತ್ರಿ ಆದರೆ ಪೊಲೀಸರಿಗೆ AK47 ಗನ್​ ಬಳಕೆಗೆ​​ ಅನುಮತಿ ನೀಡುವೆ. ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೊದಲೇ ಫೈರಿಂಗ್ ಮಾಡುತ್ತೇವೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ. ಬೈಲಹೊಂಗಲದಲ್ಲಿ ನಡೆದ ಗಣೇಶ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕೈಗೆ ಅಧಿಕಾರ ಕೊಡಿ, ಅಲ್ಲಿ ಯೋಗಿ, ಇಲ್ಲಿ ನಾವು ಇರುತ್ತೇವೆ ಎಂದರು. ಮುಂದಿನ ಬಾರಿ ನಮ್ಮ ಸರ್ಕಾರ ಬಂದಾಗ ಗಣೇಶ ವಿಸರ್ಜನೆ ಮೆರವಣಿಗೆ...
ಬೆಳಗಾವಿಸುದ್ದಿ

ಡಾ. ವಿಷ್ಣು ಸೇನಾ ಸಮಿತಿ ಬೆಳಗಾವಿ ಜಿಲ್ಲೆ ಹಾಗೂ ಗೋಕಾಕ ಘಟಕದ ಸೇನಾನಿಗಳಿಂದ ಡಾ. ವಿಷ್ಣುವರ್ಧನ್ ರವರ 74 ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು -ಕಹಳೆ ನ್ಯೂಸ್

ಡಾ. ವಿಷ್ಣುವರ್ಧನ್ ರವರ 74 ನೇ ಹುಟ್ಟುಹಬ್ಬವನ್ನು ಡಾ. ವಿಷ್ಣು ಸೇನಾ ಸಮಿತಿ ಬೆಳಗಾವಿ ಜಿಲ್ಲಾ ಹಾಗೂ ಗೋಕಾಕ ಘಟಕದ ಸೇನಾನಿಗಳು ಕನ್ನಡ ಶಾಲ ಮಕ್ಕಳಿಗೆ ನೋಟ ಬುಕ್ ಹಾಗೂ ಪೆನ್ನು ನೀಡಿ ಸಂಭ್ರಮದಿAದ ಆಚರಣೆ ಮಾಡಿ ಹಾಗೂ ಕೇಕ ಕತ್ತರಿಸಿ ಅವರ ಉಸಿರು ಇಲ್ಲದೇ ಇದ್ರು ಹೆಸರು ಬೆಳಿಸಲು ಮುಂದಾಗಿದ್ದಾರೆ....
1 2
Page 1 of 2