Thursday, November 21, 2024

ಮೈಸೂರು

ಮೈಸೂರುಸುದ್ದಿ

ಮುಡಾ ಹಗರಣ : ED ದಾಳಿ ಬೆನ್ನಲ್ಲೇ ವಾಕಿಂಗ್‌ ಮಾಡುತ್ತಿದ್ದ ಮುಡಾ ಮಾಜಿ ಆಯುಕ್ತ ಐಎಎಸ್‌ ಅಧಿಕಾರಿ ದಿನೇಶ್‌ಕುಮಾರ್‌ ಪರಾರಿ-ಕಹಳೆ ನ್ಯೂಸ್

ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ಬೆನ್ನಲ್ಲೇ ಮುಡಾದ ಮಾಜಿ ಆಯುಕ್ತ , ಐಎಎಸ್‌ ಅಧಿಕಾರಿ ದಿನೇಶ್‌ಕುಮಾರ್‌ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ದಿನೇಶ್‌ ಕುಮಾರ್‌ ನೆಲೆಸಿದ್ದ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್‌ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಡಿ ಅಧಿಕಾರಿಗಳ ದಾಳಿಯ ವೇಳೆ ದಿನೇಶ್‌ ಕುಮಾರ್‌ ವಾಕಿಂಗ್‌ ಮಾಡುತ್ತಿದ್ದರು. ಇಡಿ ಅಧಿಕಾರಿಗಳು ಮನೆಗೆ ಬಂದ ವಿಚಾರ ತಿಳಿದು ವಾಕಿಂಗ್‌...
ಬೆಂಗಳೂರುಮೈಸೂರುರಾಜ್ಯಸುದ್ದಿ

ಮೈಸೂರಿನ ಮುಡಾ ಕಚೇರಿ ಇಂಚಿಂಚೂ ಜಾಲಾಡುತ್ತಿರುವ ಇ.ಡಿ. ಅಧಿಕಾರಿಗಳಿಗೆ ಸಿಕ್ತು ಅತಿದೊಡ್ಡ ಸಾಕ್ಷ್ಯ – ಕಹಳೆ ನ್ಯೂಸ್

ಮೈಸೂರು: ಮುಡಾ ಹಗರಣ ಸಂಬಂಧ ಮೈಸೂರಿನ ಕಚೇರಿ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಎರಡನೇ ದಿನವೂ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿಯ ಮನವಿ ಪತ್ರದ ಮೇಲೆಯೇ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಪತ್ರದ ಬಗ್ಗೆ ಹತ್ತಾರು ಅನುಮಾನಗಳೇ ಹುಟ್ಟುಕೊಂಡಿವೆ. ಇದನ್ನೇ ಅರಿತ ಇಡಿ ಅಧಿಕಾರಿಗಳು ಮಹತ್ವದ ಸಾಕ್ಷಿಯೊಂದನ್ನ ಕಲೆ ಹಾಕಿದ್ದಾರೆ. ಮುಡಾ ಅಧಿಕಾರಿಗಳಿಗೆ ಸಿದ್ದರಾಮಯ್ಯ ಪತ್ನಿ ನೀಡಿದ್ದ ಮನವಿ ಪತ್ರದಲ್ಲಿ ಎರಡು ಅನುಮಾನಗಳು ಉಂಟಾಗಿವೆ. ಮನವಿ...
ಬೆಂಗಳೂರುಮೈಸೂರುರಾಜಕೀಯರಾಜ್ಯಸುದ್ದಿ

BIG BREAKING NEWS : ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ? ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಮೈಸೂರು : ಮುಡಾ ಸಂಕಷ್ಟಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಿಲುಕಿದ ನಂತರದಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ಆಡಳಿತರೂಢ ಪಕ್ಷ ಹಾಗೂ ವಿಪಕ್ಷಗಳಲ್ಲೂ ನಡೆಯುತ್ತಲೇ ಬಂದಿದೆ. ಇನ್ನೊಂದು ವರ್ಷದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದು, ರಾಜ್ಯಕ್ಕೆ ಹೊಸ ಸಿಎಂ ಆಯ್ಕೆ ಆಗಲಿದ್ದಾರೆ ಎಂಬ ಮಾತಿಗೆ ಇದೀಗ ಖುದ್ದು ಸಿದ್ದರಾಮಯ್ಯ ಅವರ ಹೇಳಿಕೆಗಳೇ ಪುಷ್ಠಿ ನೀಡಿವೆ.   ಹೌದು.. ಇಂದು ಸಿದ್ದರಾಮಯ್ಯ ಅವರು ದಸರಾ ಮಹೋತ್ಸವದ ವೇದಿಕೆಯಲ್ಲಿ ಭಾಷಣ ಮಾಡುವಾಗ,...
ಮೈಸೂರುಸುದ್ದಿ

ಮೈಸೂರು ದಸರಾ : ಕುಶಾಲು ತೋಪು ತಾಲೀಮು ವೇಳೆ ಅನಾಹುತ : ಸ್ವಲ್ಪದರಲ್ಲೇ ಬಚಾವ್ ಆದ ಕಾವಾಡಿ..!! ಅರಣ್ಯ ಇಲಾಖೆ ನಿರ್ಲಕ್ಷ್ಯ..??- ಕಹಳೆ ನ್ಯೂಸ್

ಮೈಸೂರು : ಈ ಬಾರಿ ಮೈಸೂರು ದಸರಾಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ಎಲ್ಲಾ ಹಂತದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇದೀಗ ಇಂದು ದಸರಾ ಮಹೋತ್ಸವದ ವೇಳೆ ಭಾಗವಹಿಸುವ ಆನೆಗಳಿಗೆ ಕುಶಾಲು ತೋಪು ಸಿಡಿಸಿ ತಾಲಿಮು ನಡೆಸುವ ವೇಳೆ ಭಾರಿ ಅನಾಹುತ ಒಂದು ನಡೆದಿದೆ. ಹೌದು., ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆಗೆ ಕುಶಾಲತೋಪು ಸಿಡಿಸಿ ತಾಲಿಮು ಮೂಡಿಸಲಾಗುತ್ತಿತ್ತು. ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಈ ಒಂದು ತಾಲಿಮು ನಡೆಸಲಾಗುತ್ತಿತ್ತು. ಸದ್ದಿಗೆ...
ಮೈಸೂರುರಾಜ್ಯಸುದ್ದಿ

ಮೈಸೂರು ದಸರಾ : ಅರಮನೆಯಲ್ಲಿ ಕಿತ್ತಾಡಿಕೊಂಡ ಆನೆಗಳು, ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು..! – ಕಹಳೆ ನ್ಯೂಸ್

ಮೈಸೂರು : ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ ದಸರಾ ಆನೆಗಳು ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ರಾತ್ರಿ ವೇಳೆ ನಡೆದಿದ್ದು ಗಜಪಡೆಯ ಆನೆಗಳ ಕಿತ್ತಾಟದಿಂದ (Elephants Fight) ಪ್ರವಾಸಿಗರು ಆತಂಕಕ್ಕೆ ಒಳಗಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. ಒಂದಕೊಂದು ಕಿತ್ತಾಡಿಕೊಂಡು ಆನೆಗಳು ಚೆಲ್ಲಾಪಿಲ್ಲಿಯಾಗಿ ಓಡಾಡಿವೆ. ಅರಮನೆ ಅಂಗಳ ಬಿಟ್ಟು ಎರಡು ಆನೆಗಳು ರಸ್ತೆಗೆ ನುಗ್ಗಿವೆ. ಹೀಗಾಗಿ ಆನೆ ನಿಯಂತ್ರಿಸಲು ಸ್ವತಃ ಮಾವುತನೇ ವಿಫಲನಾಗಿ ಆನೆ ಬಿಟ್ಟು ಕೆಳಗೆ ಇಳಿದಿದ್ದಾನೆ. ಆಹಾರ...
ಬೆಂಗಳೂರುಮೈಸೂರುರಾಜಕೀಯರಾಜ್ಯಸುದ್ದಿ

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ; ಸರ್ಕಾರದಿಂದ ವಿವರ ಕೋರಿದ ರಾಜ್ಯಪಾಲರು – ಕಹಳೆ ನ್ಯೂಸ್

ಕರ್ನಾಟಕದಲ್ಲಿ ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಣ ಜಟಾಪಟಿ ಜೋರಾಗಿದೆ. ಮುಡಾ ಹಗರಣದ ಪ್ರಾಸಿಕ್ಯೂಷನ್​​ ಅನುಮತಿಯಿಂದ ಆರಂಭವಾದ ಜಿದ್ದಾಜಿದ್ದಿ ಹಲವು ಆಯಾಮಗಳಿಗೆ ಹೊರಳಿದೆ. ಇದೀಗ ಮುಡಾ ಸಂಬಂಧ ಸಲ್ಲಿಕೆಯಾಗಿರುವ ಮತ್ತೊಂದು ದೂರಿನ ಆಧಾರದಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲರು ವಿವರ ಕೋರಿದ್ದಾರೆ. ಬೆಂಗಳೂರು, ಸೆಪ್ಟೆಂಬರ್ 19: ಮುಡಾ ಹಗರಣದಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರು ಇದೀಗ ಅದೇ ಪ್ರಕರಣದಲ್ಲಿ ದಾಖಲಾಗಿರುವ ಮತ್ತೊಂದು ದೂರಿಗೆ ಸಂಬಂಧಿಸಿ...
ಬೆಂಗಳೂರುಮೈಸೂರುರಾಜಕೀಯರಾಜ್ಯಸುದ್ದಿ

ಮೈಸೂರು ನಾಡದೇವತೆ ಚಾಮುಂಡೇಶ್ವರಿ ತಾಯಿಯ ಆಸ್ತಿಗೆ ಕೈಹಾಕಿ ಮೂರೇ ತಿಂಗಳಲ್ಲಿ ಸಿಎಂಗೆ ಮುಡಾ ಉರುಳು! ; ಪ್ರಶ್ನಿಸಿ ಪ್ರಮೋದಾದೇವಿ ಒಡೆಯರ್​​ ರಿಟ್ ಅರ್ಜಿ ಕಾಂಗ್ರೆಸ್ ಸರ್ಕಾರದ ನಡೆಗೆ ಹೈಕೋರ್ಟ್ ತಾತ್ಕಾಲಿಕ ಬ್ರೇಕ್ – ಕಹಳೆ ನ್ಯೂಸ್

ಮೈಸೂರು ಚಾಮುಂಡಿ ಬೆಟ್ಟದ ಮೇಲೆ ಕಾಂಗ್ರೆಸ್ ಸರ್ಕಾರದ ಕಣ್ಣು ಬಿದ್ದಿದೆ ಎಂದು ಅನುಮಾನಗಳು ಹುಟ್ಟಿಕೊಂಡಿವೆ. 2024ರ ಮಾ.7ರಂದು ಹೊಸ ಕಾಯ್ದೆ ಜಾರಿ ಮೂಲಕ ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟಕುಗೊಳಿಸಿ ನಿಯಮ ತರಲಾಗಿದೆ. ಹೀಗಾಗಿ ಇದನ್ನು ಪ್ರಶ್ನಿಸಿ ಪ್ರಮೋದಾದೇವಿ ಒಡೆಯರ್​​ ರಿಟ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿ ಹೈಕೋರ್ಟ್ ಏಕಸದಸ್ಯ ಪೀಠದಿಂದ ತಡೆ ನೀಡಲಾಗಿದೆ. ಬೆಂಗಳೂರು, ಆಗಸ್ಟ್​ 11: ಸಿಎಂ ಸಿದ್ದರಾಮಯ್ಯ ಸರ್ಕಾರ ಇತ್ತೀಚೆಗೆ ಅಂದರೆ ಮಾರ್ಚ್​ 7ರಂದು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ...
ಬೆಂಗಳೂರುಮೈಸೂರುರಾಜಕೀಯರಾಜ್ಯಸುದ್ದಿ

‘ಮುಡಾ ಹಗರಣ’ಕ್ಕೆ ಬಿಗ್ ಟ್ವಿಸ್ಟ್ : ಬದಲಿ ನಿವೇಶನ ಕೋರಿ ಸಿದ್ಧರಾಮಯ್ಯ ಬರೆದಿದ್ದ ಪತ್ರ ವೈರಲ್ – ಕಹಳೆ ನ್ಯೂಸ್

ಬೆಂಗಳೂರು: ಮೈಸೂರಿನ ಮುಡಾ ಹಗರಣ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸಿದರು. ಹಗರಣ ಸಂಬಂಧ ರಾಜ್ಯಪಾಲರಿಗೂ ದೂರು ನೀಡಲಾಗಿದೆ. ಇದರ ನಡುವೆ 1984ರಲ್ಲಿ ಸಿದ್ಧರಾಮಯ್ಯ ಅವರು ಮುಡಾಗೆ ಬದಲಿ ನಿವೇಶನಕ್ಕಾಗಿ ಖುದ್ದು ಬರೆದಿದ್ದಂತ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮೂಲಕ ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತೆ ಆಗಿದೆ. ಮುಡಾ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ. ನನಗೆ ಅಧಿಕಾರ, ಹಣದ ಮೇಲೆ ವ್ಯಾಮೋಹವೂ ಇಲ್ಲ....
1 2 3 7
Page 1 of 7