ಪ್ರೇಮಕುಮಾರಿಗೆ ವಂಚನೆ ಪ್ರಕರಣದಲ್ಲಿ ಶಾಸಕ ರಾಮದಾಸ್‍ಗೆ ನಿರೀಕ್ಷಣಾ ಜಾಮೀನು-ಕಹಳೆ ನ್ಯೂಸ್
ಮೈಸೂರು: ಮೈಸೂರು ಶಾಸಕ ರಾಮದಾಸ್ ಅವರು ಪ್ರೇಮಾಕುಮಾರಿಗೆ ವಂಚನೆ ನಡೆಸಿ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಿಲ್ಲಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ರಾಮದಾಸ್ ಹಾಗೂ ಪ್ರೇಮಕುಮಾರಿ ಅವರ ರಾಜ್ಯದಾದ್ಯಂತ ಬಾರೀ ಸುದ್ದಿಯಾಗಿದ್ದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರೇಮಾಕುಮಾರಿ ಪ್ರಕರಣದಲ್ಲಿ ರಾಮದಾಸ್ ಅವರ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಮೈಸೂರಿನ ರಸ್ವತಿಪುರಂ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಪೊಲೀಸರು ಸಲ್ಲಿಸಿದ್ದ ವರದಿಯನ್ನು...