ಶಿವಮೊಗ್ಗದಲ್ಲಿ ಘೋರ ಘಟನೆ : ಆಯತಪ್ಪಿ ಕೆಳಗೆ ಬಿದ್ದ ವಿದ್ಯಾರ್ಥಿ ಮೇಲೆ ಬಸ್ ಹರಿದು ದುರಂತ ಸಾವು!- ಕಹಳೆ ನ್ಯೂಸ್
ಶಿವಮೊಗ್ಗ : ನಗರದ ಮೈಲಾರೇಶ್ವರ ದೇವಾಲಯದ ಬಳಿ ನಗರ ಸಾರಿಗೆ ಬಸ್‌ನಿಂದ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ, ಗುರುಪುರದಿಂದ ಆತ ಸಿಟಿಯಲ್ಲಿನ ಕಾಲೇಜಿಗೆ ಬರುವಾಗ ಈ ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಪ್ರಥಮ ಪಿಯು ಕಾಮರ್ಸ್ ವಿದ್ಯಾರ್ಥಿ ಯಶವಂತ್ (17) ಎಂದ್ ತಿಳಿದುಬಂದಿದೆ. ಯಶವಂತ ಬಸ್‌ನಲ್ಲಿ ಪುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದ. ಸಿಟಿ ಬಸ್ ಮೈಲಾರೇಶ್ವರ ದೇವಾಲಯದ ಬಳಿ ಬರುವಾಗ, ಚಾಲಕ ಬ್ರೇಕ್ ಹಾಕಿದ್ದಾನೆ. ಇದಕ್ಕಿದ್ದಂತೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ...