ನಕಲಿ ಸಹಿ ಮಾಡಿ ವಿಚ್ಛೇದನ ಪಡೆದ ಪತಿ : ಕೋರ್ಟ್ ಆವರಣದಲ್ಲೇ ಥಳಿಸಿದ ಪತ್ನಿ-ಕಹಳೆ ನ್ಯೂಸ್
ಹುಬ್ಬಳ್ಳಿ: ಜೀವನಾಂಶ ಕೇಳಿ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯೊಬ್ಬಳು ಒಂದು ವರ್ಷದ ಹಿಂದೆಯೇ ಪತಿ ವಿಚ್ಛೇದನ ಪಡೆದಿರುವುದು ಗೊತ್ತಾಗಿ ಕೋರ್ಟ್ ಆವರಣದಲ್ಲಿಯೇ ಸಹೋದರಿಯೊಂದಿಗೆ ಪತಿಗೆ ಥಳಿಸಿದ ಘಟನೆ ಸೋಮವಾರ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ನಗರದ ಶಾಂತಿನಿಕೇತನ ಕಾಲೋನಿ ನಿವಾಸಿ ಲಲಿತಾ ಎಂಬುವರು ವಾಯವ್ಯ ಸಾರಿಗೆ ಸಂಸ್ಥೆಯ ನೌಕರ ಬೆಳಗಾವಿ ಜಿಲ್ಲೆ ರಾಮದುರ್ಗದ ಕುಮಾರನಿಂದ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಕುಮಾರ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಸೋಮವಾರ ನ್ಯಾಯಾಲಯಕ್ಕೆ ಆಗಮಿಸಿದ್ದಾಗ,...