ಅಕ್ಷಯ ಕಾಲೇಜು: ರಕ್ಷಕ ಶಿಕ್ಷಕ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ- ಕಹಳೆ ನ್ಯೂಸ್
ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಸಭೆಯಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಪುತ್ತೂರು ಟೌನ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯದ ಶ್ರೀ ಶೇಖರ್ ಶೆಟ್ಟಿ ಇವರು, ಸೋಲು ಗೆಲುವಿನ ಪಯಣದಲ್ಲಿ ಮಕ್ಕಳನ್ನು ಸೋಲಲು ಬಿಡಿ, ಸೋತ ನಂತರ ಗೆಲುವು ಪಡೆದುಕೊಳ್ಳುವುದು ಗೆಲುವಿನ ಪ್ರಥಮ ದಾರಿಯಾಗಿರುತ್ತದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು...