ಪುತ್ತೂರಿನ ಸೈಂಟ್ ವಿಕ್ಟರ್ಸ್ ಪ್ರೌಢಶಾಲೆಯಲ್ಲಿ ಎಸೆಸ್ಸೆಲ್ಲಿ, ವಠಾರದಲ್ಲಿ ಫಿಲ್ಮ್ ಶೂಟಿಂಗ್ ಇವರಿಗೆ ಯಾವುದೇ ಕಾನೂನು ಇಲ್ವೆ?, ಮಕ್ಕಳ ಭವಿಷ್ಯದಲ್ಲಿ ಶಾಲಾ ಆಡಳಿತ ಸಮಿತಿಯ ಚೆಲ್ಲಾಟ.-ಕಹಳೆ ನ್ಯೂಸ್
ಪುತ್ತೂರು: ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರವಾಗಿರುವ ಸೈಂಟ್ ವಿಕ್ಟರ್ಸ್ ಪ್ರೌಢ ಶಾಲೆಯ ಆವರಣದಲ್ಲಿ ಕನ್ನಡ ಸಿನಿಮಾವೊಂದಕ್ಕೆ ಶೂಟಿಂಗ್ ಗೆ ಅವಕಾಶ ಕೊಟ್ಟು ಶಾಲಾ ಆಡಳಿತ ಮಂಡಳಿ ಎಡವಟ್ಟು ಮಾಡಿಕೊಂಡಿದೆ. ಇಲ್ಲಿ ನಟ ಆರ್ಯನ್ ಅಭಿನಯದ `ಲವ್ ಟು ಲಸ್ಸಿ' ಎಂಬ ಕನ್ನಡ ಚಲನಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇದಕ್ಕೆ ಕಳೆದ ಒಂದೂವರೆ ತಿಂಗಳ ಹಿಂದೆಯೇ ಶಾಲಾ ಸಂಚಾಲಕರಿಂದ ಅನುಮತಿ ಪಡೆಯಲಾಗಿತ್ತು. ಆದ್ರೆ ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ...