Recent Posts

Sunday, January 19, 2025

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಪುತ್ತೂರುಸುದ್ದಿ

ಬೀದರ್ ಗುತ್ತಿಗೆದಾರರ ಸಾವಿನ ಪ್ರಕರಣ; ಪುತ್ತೂರಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ತುರ್ತು ಪ್ರತಿಭಟನೆ –ಕಹಳೆ ನ್ಯೂಸ್

ಪುತ್ತೂರು: ಬೀದರ್ ಗುತ್ತಿಗೆದಾರರ ಸಾವಿನ ಪ್ರಕರಣಕ್ಕೆ ಸಂಬAಧಿಸಿ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಪುತ್ತೂರಿನ ಬಿಜೆಪಿ ಕಚೇರಿ ಎದುರುಗಡೆ ತುರ್ತು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ ಪುತ್ತೂರು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ದಯಾನಂದ ಉಜಿರೆಮಾರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ರು....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವ ಜನಾಂಗಕ್ಕೆ ಶಿಕ್ಷಣದ ಜೊತೆಗೆ ಉದ್ಯೋಗ ಕೊಡುವ ಕಡೆ ಗಮನ ಹರಿಸಬೇಕಾಗಿದೆ.. ಜಗನ್ನಾಥ ಬಂಗೇರ ನಿರ್ಮಾಲ್

ಬಂಟ್ವಾಳ : ಮಕ್ಕಳು ಇಡುವ ಹೆಜ್ಜೆಯ ಮೇಲೆ ನಮ್ಮ ದೇಶದ ಭವಿಷ್ಯ ನಿಂತಿದೆ. ಆದುದರಿಂದ ಯುವ ಜನಾಂಗಕ್ಕೆ ಶಿಕ್ಷಣದ ನೀಡುವುದರ ಜೊತೆಗೆ ಉದ್ಯೋಗ ಕೊಡುವ ಕಡೆ ಗಮನ ಹರಿಸಬೇಕಾಗಿದೆ ಎಂದು ನಾಲ್ಕೈತಯ ಪಂಜುರ್ಲಿ ಸೇವಾ ಸಮಿತಿ ನರಿಕೊಂಬು ಇದರ ಅಧ್ಯಕ್ಷರಾದ ಜಗನ್ನಾಥ ಬಂಗೇರ ನಿರ್ಮಲ್ ಹೇಳಿದರು. ಅವರು ಬುಧವಾರ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ವಿಜಯಲಕ್ಷ್ಮಿ ಯುವಕ ಸಂಘ( ರಿ.) ನರಿಕೊಂಬು ಇದರ ವಠಾರದಲ್ಲಿ ನಡೆದ ಸಂಘದ 55...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ ಶುದ್ಧ ಜಲ ಅಭಿಯಾನ -ಕಹಳೆ ನ್ಯೂಸ್

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ ಈ ತಿಂಗಳು ಶುದ್ಧ ಜಲ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸುಮಾರು 1.50 ಲಕ್ಷ ಜನರಿಗೆ ಶುದ್ಧಜಲ ಬಳಕೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್ ತಿಳಿಸಿದ್ದಾರೆ. ಜನರಿಗೆ ಶುದ್ಧ ನೀರು ಕೊಡುವ ಉದ್ದೇಶಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಕರ್ನಾಟಕದಲ್ಲಿ ಸಮುದಾಯ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪಿಸುವ ನಿರ್ಧಾರ ಕೈಗೊಂಡರು. 2009ರಲ್ಲಿ ಚಿಕ್ಕಮಗಳೂರು...
ಕಡಬದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ರಾಜ್ಯ ಹೊರತುಪಡಿಸಿ ಉಳಿದ ಯಾವುದೇ ರಾಜ್ಯ ಫಿಸಿಕಲ್ ಸರ್ವೆ ನಡೆಸಿ ವರದಿ ನೀಡಿಲ್ಲ : ಸಚಿವೆ ಶೋಭಾ ಕರಂದ್ಲಾಜೆ -ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಫಿಸಿಕಲ್ ಸರ್ವೆ ನಡೆಸಿದಾಗ ಮಾತ್ರ ಯಥಾಸ್ಥಿತಿ ತಿಳಿಯಲಿದೆ. ಆದರೆ ಕೇರಳ ರಾಜ್ಯ ಹೊರತುಪಡಿಸಿ ಯಾವುದೇ ರಾಜ್ಯ ಫಿಸಿಕಲ್ ಸರ್ವೆ ನಡೆಸಿ ವರದಿ ನೀಡಿಲ್ಲ ಎಂದು ಕೇಂದ್ರ ಅತಿ ಸಣ್ಣ, ಸಣ್ಣ, ಮಾಧ್ಯಮ ಕೈಗಾರಿಕಾ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಕಡಬ ತಾಲೂಕಿನ ಕೇರ್ಪಡದಲ್ಲಿ ಮಾತನಾಡಿದ ಅವರು ಇದು ಹಿಂದಿನವರು ಮಾಡಿರುವ ತಪ್ಪು. ಏರಿಯಲ್ ಸರ್ವೆ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಮೃದ್ಧಿ ಜೆ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ-ಕಹಳೆ ನ್ಯೂಸ್

ಪುತ್ತೂರು:ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಮೃದ್ಧಿ ಜೆ ಶೆಟ್ಟಿ ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಹಾಗೂ ಹರಿಣಾಕ್ಷಿ ಜೆ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಕಾಲೇಜಿನ ದೈಹಿಕಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನ ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಸಾಮಾನ್ಯ ಸೈಕಲನ್ನು ಎಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸಿ ತನ್ನ ಪ್ರತಿಭೆಯನ್ನು ಮೆರೆದ ವಿದ್ಯಾರ್ಥಿ-ಕಹಳೆ ನ್ಯೂಸ್

ಬಂಟ್ವಾಳ: ಕಡೇಶ್ವಾಲ್ಯ ಸರಕಾರಿ ಶಾಲೆಯ ವಿದ್ಯಾರ್ಥಿಯೋರ್ವ ತನ್ನಲ್ಲಿರುವ ಸಾಮಾನ್ಯ ಸೈಕಲನ್ನು ಎಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸಿ ತನ್ನ ಪ್ರತಿಭೆಯನ್ನು ಮೆರೆದಿದ್ದಾನೆ. ಕೆದಿಲ ಗ್ರಾಮದ ಗುಡ್ಡಕೋಡಿ ನಿವಾಸಿ ಲಿಂಗಪ್ಪ ನಾಯ್ಕ-ಆಶಾ ದಂಪತಿಯ ಪುತ್ರ, ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಮೋಕ್ಷಿತ್ ನಾಯ್ಕ ಈಗ 2 ಕಿ.ಮೀ.ದೂರದ ಶಾಲೆಗೆ ಇದೇ ಸೈಕಲ್‌ನಲ್ಲಿ ಹೋಗುತ್ತಾನೆ. 9 ಸಾವಿರ ರೂ. ವೆಚ್ಚ ಮೋಕ್ಷಿತ್‌ಗೆ ಶಾಲೆಗೆ ಹೋಗಲು ಹೆತ್ತವರು ಸೈಕಲ್ ತೆಗೆದುಕೊಟ್ಟಿದ್ದರು. ಅದನ್ನು ಎಲೆಕ್ಟ್ರಿಕ್ ಸೈಕಲಾಗಿ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಡಿಜಿಟಲ್ ಯುಗದಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ: ಶ್ರೀಧರ್ ಎನ್ಕಮಜೆ-ಕಹಳೆ ನ್ಯೂಸ್

ಮಂಗಳೂರು : ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನ ಒಳಗೆ ಬದುಕುತ್ತಿದ್ದೇವೆ. ಹಾಗಾಗಿ ಗ್ರಾಹಕ ಹಿತರಕ್ಷಣಾ ಕಾನೂನಿನ ಬಗೆಗೆ ಜಾಗೃತಿ ಹೊಂದಿರುವುದು ಈ ಹೊತ್ತಿನ ಅಗತ್ಯ ಎಂದು ಮಂಗಳೂರು ಬಾರ್ ಅಸೋಸಿಯೇಶನ್ನ ಮಾಜಿ ಸಾಮಾನ್ಯ ಕಾರ್ಯದರ್ಶಿ ಶ್ರೀಧರ್ ಎನ್ಕಮಜೆ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಪಿ. ಎಫ್. ಪ್ರಥಮ ದರ್ಜೆ ಕಾಲೇಜು, ನಡುಪಡವು, ಕೊಣಾಜೆ ಇವರ ಸಂಯುಕ್ತ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸಂತಾಪಸುದ್ದಿ

ಯಕ್ಷಗಾನ ಮೇಳದ ಸ್ತ್ರೀ ವೇಷಧಾರಿ, ಯುವ ಕಲಾವಿದ ರಸ್ತೆ ಅಪಘಾತದಲ್ಲಿ ಮೃ*ತ್ಯು-ಕಹಳೆನ್ಯೂಸ್

ಮಂಗಳೂರು: ನಗರದ ಹೊರವಲಯದ ಅರ್ಕುಳದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯಕ್ಷಗಾನದ ಉದಯೋನ್ಮುಖ ಕಲಾವಿದ ಮುಂಡೂರಿನ ಪ್ರವೀತ್ ಆಚಾರ್ಯ (22) ಕೊನೆಯುಸಿರೆಳೆದರು. ಮುಂಡೂರಿನ ಭಾಸ್ಕರ ಆಚಾರ್ಯ ಮತ್ತು ಭಾರತೀ ಆಚಾರ್ಯ ದಂಪತಿಯ ಪುತ್ರರಾದ ಅವರು ಅವರು ಸಸಿಹಿತ್ಲು ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದರು. ಅವರು ಸ್ತ್ರೀವೇಷಗಳಿಗೆ ಅದರಲ್ಲೂ ದೇವಿಯ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಅವರು ವಿಟ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್‌ಡಬ್ಲ್ಯು ವಿದ್ಯಾರ್ಥಿಯಾಗಿದ್ದರು. ಯಕ್ಷಗಾನ ಪ್ರದರ್ಶನಕ್ಕೆ ತೆರಳಲು...
1 12 13 14 15 16 512
Page 14 of 512