ಕ್ಯಾನ್ಸರ್ ಚಿಕಿತ್ಸೆ ಬಳಿಕ ಕೇಶ ಕಳೆದು ಕೊಂಡವರಿಗೆ ” ಕೇಶದಾನ ” ; ‘ ಸೀಡ್ಸ್ ಆಫ್ ಹೋಪ್ ‘ ವಿದ್ಯಾರ್ಥಿ ತಂಡದ ಸಾರಥ್ಯದಲ್ಲಿ 67 ಮಂದಿಯಿಂದ ಕೇಶದಾನ – ಕಹಳೆ ನ್ಯೂಸ್
ಪುತ್ತೂರು: ಮಾರಕ ಕಾಯಿಲೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡ ಬಳಿಕ ಕೇಶನಷ್ಟದ ಸಂಕಷ್ಟವನ್ನು ಅನುಭವಿಸುತ್ತಿರುವ ರೋಗಿಗಳಿಗೆ ವಿಕ್‌ಮೂಲಕ ಕೇಶ ಕೊಡಿಸುವ ಪ್ರಯತ್ನಕ್ಕೆ ಸಂಬಂಧಿಸಿ ಪುತ್ತೂರಿನ ೯ ಮಂದಿ ‘ಸೀಡ್ಸ್ ಆಫ್ ಹೋಪ್’ ತಂಡದ ವಿದ್ಯಾರ್ಥಿಗಳ ತಂಡದ ಸಾರಥ್ಯದಲ್ಲಿ ಡಿ.೨೦ರಂದು ಮುಳಿಯ ಜೆಸಿಐ ಟ್ರೈನಿಂಗ್ ಹಾಲ್‌ನಲ್ಲಿ ಕೇಶ ದಾನ ಕಾರ್ಯಕ್ರಮ ನಡೆಯಿತು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ ಅವರ ಪರಿಕಲ್ಪನೆಯಲ್ಲಿ ಇಷಾ ಸುಲೋಚನಾ ಮುಳಿಯ, ವರ್ಷ ಭಟ್, ನೇಹಾ...