ವಿಶ್ವ ದಾಖಲೆ ಬರೆದ ಆದಿ ಸ್ವರೂಪಾ – ಕಹಳೆ ನ್ಯೂಸ್
ಮಂಗಳೂರು: ಏಕಕಾಲದಲ್ಲಿ ಎರಡು ಕೈಗಳಿಂದ ಒಂದು ನಿಮಿಷಕ್ಕೆ 45 ಪದಗಳಂತೆ ಯುನಿಡೈರೆಕ್ಷನಲ್ ವಿಭಾಗದ ಶೈಲಿಯಲ್ಲಿ ಇಂಗ್ಲಿಷ್ ಪದಗಳನ್ನು ಬರೆಯುವ ವಿದ್ಯಾರ್ಥಿನಿ ಆದಿ ಸ್ವರೂಪಾಳ ಪ್ರತಿಭೆಗೆ ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಷನ್, ಎಕ್ಸ್‌ಕ್ಲೂಸಿವ್ ವರ್ಡ್ ರೆಕಾರ್ಡ್ ದಾಖಲೆಯನ್ನು ಘೋಷಿಸಿದೆ. ಇಲ್ಲಿನ ಕೊಡಿಯಾಲ್‌ಬೈಲ್ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯಾಗಿರುವ ಆದಿ ಸ್ವರೂಪಾ, ಎರಡೂ ಕೈಯಲ್ಲಿ ಸರಾಗವಾಗಿ ಬರೆಯುತ್ತಾಳೆ. ಎರಡು ವರ್ಷಗಳಲ್ಲಿ ಈಕೆ ಹತ್ತು ವಿಭಿನ್ನ ರೀತಿಯಲ್ಲಿ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ....