ಕಾಸರಗೋಡು – ದಕ್ಷಿಣ ಕನ್ನಡ ಜಿಲ್ಲೆ : ನಿಬಂಧನೆಗಳೊಂದಿಗೆ ಸಂಚಾರ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್ – ಕಹಳೆ ನ್ಯೂಸ್
ಕಾಸರಗೋಡು, ಆ. 03 : ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿ ತೆರವಿಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾಡಳಿತ ಹಾಗೂ ಕಾಸರಗೋಡು ಉಸ್ತುವಾರಿ ಸಚಿವರ ಸಭೆ ಇಂದು ನಡೆದಿದ್ದು ಈ ಹಿಂದೆ ಇದ್ದ ದೈನಂದಿನ ಪಾಸ್‌ನ್ನು ಕೆಲವೊಂದು ನಿಬಂಧನೆಗಳೊಂದಿಗೆ ಪುನರ್ ಆರಂಭ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಗಡಿ ಜಿಲ್ಲೆಗಳ ನಡುವೆ ಸಂಚಾರ ಮಾಡುವವರು ಏಳು ದಿನಕ್ಕೊಮ್ಮೆ ಕೋವಿಡ್ ತಪಾಸಣೆಗೆ ಒಳಗಾಗಬೇಕಾಗಿದ್ದು ವಿವಾಹ, ಮರಣ ಮೊದಲಾದ ಕಾರ್ಯಕ್ರಮಗಳಿಗೆ ಅಂತಾರಾಜ್ಯ ಸಂಚಾರಕ್ಕೆ ನಿಬಂಧನೆಗಳೊಂದಿಗೆ...