ಶಂಭೂರು ಶಾಲಾ 98 ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ : ಸರಕಾರಿ ಶಾಲೆಗಳ ಬೆಳವಣಿಗೆಗೆ ಒಗ್ಗಟ್ಟಿನ ಮಂತ್ರ ಅತ್ಯಗತ್ಯ : ಸಂತೋಷ್ ಕುಮಾರ್ -ಕಹಳೆ ನ್ಯೂಸ್
ಬಂಟ್ವಾಳ : ಸರಕಾರಿ ಶಾಲೆಗಳು ಬೆಳೆಯಲು ಜಾತಿ, ಮತ, ಪಂಥ, ಪಕ್ಷ ಬೇಧ ಮರೆತು ಊರವರು, ಪಾಲಕರು ಮತ್ತು ಹಿರಿಯ ವಿದ್ಯಾರ್ಥಿಗಳು ಜೊತೆ ಜೊತೆಯಾಗಿ ಸಹಕರಿಸಿ ಒಗ್ಗಟ್ಟಿನಿಂದ ದುಡಿಯಬೇಕು. ವೈಯಕ್ತಿಕ ಮೇಲ್ಮೆಗಾಗಿ ಹಾತೊರೆಯುವಿಕೆ ಸಲ್ಲದು. ವಿದ್ಯಾರ್ಥಿಗಳನ್ನು ರಾಷ್ಟ್ರದ ಭವ್ಯ ಪ್ರಜೆಗಳನ್ನಾಗಿ ರೂಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 98 ನೇ...