Sunday, January 19, 2025

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಖಾಸಗಿ ಆಸ್ಪತ್ರೆಯ ಮೂವರು ವೈದ್ಯರಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಪುತ್ತೂರು : ತಾಲೂಕಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಮೂವರು ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೂವರೂ ವೈದ್ಯರು, ಪುತ್ತೂರಿನಲ್ಲಿ ಜನಪ್ರಿಯತೆಯನ್ನು ಹೊಂದಿದ್ದು, ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದವರಾಗಿದ್ದು, ಕೊರೊನಾ ಪಾಸಿಟಿವ್ ಹೊಂದಿದ್ದ ರೋಗಿಗಳ ಸಂಪರ್ಕದಿಂದ ಇವರಿಗೂ ಸೋಂಕು‌ ತಗುಲಿದೆ ಎಂದು ತಿಳಿದು ಬಂದಿದೆ. ಸದ್ಯ ಒಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊಬ್ಬರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರವಾಗಿ ಮೂವರು ಗುಣಮುಖರಾಗಲಿ ಎಂಬುದು ಪುತ್ತೂರಿನ ಜನತೆಯ ಹಾರೈಕೆ....
ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿ

ಬೆಳ್ತಂಗಡಿಯ ಅಕ್ರಮ ಇಸ್ಟೀಟ್ ಅಡ್ಡೆಯಲ್ಲಿ ಪೊಲೀಸರಂತೆ ನಟಿಸಿ 10 ಲಕ್ಷ ನಗದು ದರೋಡೆಗೈದ ಮುಸ್ತಾಪ ಸಹಿತ ಮೂವರು ಆರೋಪಿಗಳು ಪೊಲೀಸರಿಗೆ ಶರಣು – ಕಹಳೆ ನ್ಯೂಸ್

ಬೆಳ್ತಂಗಡಿ: ಲಾಯಿಲ ಗ್ರಾಮದ ಪಡ್ಲಾಡಿ ಎಂಬಲ್ಲಿ ಮೇ 29ರಂದು ಅಕ್ರಮವಾಗಿ ಇಸ್ಪೀಟ್ ಆಟವಾಡಿ ಪೊಲೀಸರಂತೆ ನಟಿಸಿ ಆಟದಲ್ಲಿ ನಿರತರಾಗಿದ್ದ ಚಿಕ್ಕಮಗಳೂರು ಮಳಲೂರು ನಿವಾಸಿ ಹೊಯ್ಸಳ ಜೆ.ಪಿ ಎಂಬವರ ರೂ. 10 ಲಕ್ಷ ನಗದು ಇದ್ದ ಬ್ಯಾಗನ್ನು ದರೋಡೆಗೈದ ಮೂವರು ಆರೋಪಿಗಳು ಬೆಳ್ತಂಗಡಿ ಪೊಲೀಸರಿಗೆ ಶರಣಾಗಿದ್ದಾರೆ. ಗುರುವಾಯನಕೆರೆ ದಾವೂದ್ ಎಂಬಾತನ ತಂಡದ ಮುಸ್ತಾಪ, ಇಮ್ತಿಯಾಜ್ ಹಾಗೂ ಚೇರಿಮೋನು ಶರಣಾದ ಆರೋಪಿಗಳಾಗಿದ್ದು, ತನಿಖೆ ನಡೆಸಿದ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಆರೋಪಿಗಳಿಂದ ರೂ....
ದಕ್ಷಿಣ ಕನ್ನಡಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 311 ಮಂದಿಗೆ ಕೊರೊನಾ ಪಾಸಿಟಿವ್ ; ಇಂದು ಒಂದೇ ದಿನ ಎಂಟು ಮಂದಿ ಬಲಿ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 311 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ನಿನ್ನೆ 238 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ನಿನ್ನೆ ಆರು ಮಂದಿ ಸಾವನ್ನಪ್ಪಿದ್ದರು. ಆದರೆ, ಇಂದು‌ ಎಂಟು ಮಂದಿ ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳ್ತಂಗಡಿಯ ಪುತ್ತಿಲದ ವ್ಯಕ್ತಿ ಮೃತ್ಯು ; ಕೊರೋನಾ ಸೋಂಕು ದೃಢ – ಕಹಳೆ ನ್ಯೂಸ್‌

ಪುತ್ತೂರು: ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಯಿಂದ ಜು. 17ರಂದು ಮೃತಪಟ್ಟಿದ್ದು, ಮೃತಪಟ್ಟ ವ್ಯಕ್ತಿಯ ಕೊರೋನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಜು.14ರಂದು ಬೆಳ್ತಂಗಡಿ ತಾಲೂಕಿನ ಪುತ್ತಿಲದ ಸುಮಾರು 57 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಯಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜು. 16ರಂದು ಅವರ ಗಂಟಲು ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. 17ರಂದು ಆ ವ್ಯಕ್ತಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ವ್ಯಕ್ತಿ...
ದಕ್ಷಿಣ ಕನ್ನಡರಾಜಕೀಯಸುದ್ದಿ

ಖೋಡೆಸ್ ರಮ್ ಕುಡಿದ್ರೆ ಕೊರೊನಾ ಓಡುತ್ತೆ ; ಉಳ್ಳಾಲ ಕಾಂಗ್ರೆಸ್ ಕೌನ್ಸಿಲರ್ ಬಿಟ್ಟಿ ಸಲಹೆ – ಕಹಳೆ ನ್ಯೂಸ್

ಮಂಗಳೂರು: ಖೋಡೆಸ್ ರಮ್ ಕುಡಿದ್ರೆ ಕೊರೊನಾ ವೈರಸ್ ಹತ್ತಿರನೇ ಸುಳಿಯೋದಿಲ್ಲ ಎಂದು ಉಳ್ಳಾಲನಗರ ಸಭೆಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ಹೇಳಿದ ಬಿಟ್ಟಿ ಉಪದೇಶ ಇದೀಗ ಎಲ್ಲರ ಟೀಕೆಗೆ ಗುರಿಯಾಗಿದೆ. ಉಳ್ಳಾಲ ನಗರ ಸಭೆಯ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ, ಮದ್ಯದ ಬಾಟಲಿ ಹಿಡಿದುಕೊಂಡು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ತಾನು ಕುಡಿಯುವುದಿಲ್ಲ ಎಂದು ಹೇಳಿಕೊಂಡು ಮದ್ಯ ತುಂಬಿದ ಬಾಟಲಿ ಹಿಡಿದು ಜನಸಾಮಾನ್ಯರಿಗೆ ಖೋಡೆಸ್ ರಮ್ ಕುಡಿಯಲು ಸಲಹೆ ನೀಡುತ್ತಿರುವ ವೀಡಿಯೋ ವೈರಲ್...
ಕ್ರೈಮ್ದಕ್ಷಿಣ ಕನ್ನಡಮೂಡಬಿದಿರೆ

ಮೂಡುಬಿದಿರೆಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಮೀನು ವ್ಯಾಪಾರಿ ‘ ಬೋಲ್ಟ್ ‘ ಆಸಿಫ್..! – ಕಹಳೆ ನ್ಯೂಸ್

ಮೂಡುಬಿದಿರೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಮಾರ್ಪಾಡಿಯ ಮೀನು ವ್ಯಾಪಾರಿಯೊಬ್ಬ ಅತ್ಯಾಚಾವೆಸಗಿದ ಘಟನೆ ಮೂಡುಬಿದಿರೆಯ ಮಾರ್ಪಾಡಿಯಲ್ಲಿ ನಡೆದಿದೆ. ಸ್ಥಳೀಯ ಮೀನು ವ್ಯಾಪಾರಿ ಆಸಿಫ್ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಬಂಧಿತ ಮೀನು ವ್ಯಾಪಾರಿ ಅಸೀಫ್ , ತಾನು ವಾಸವಿದ್ದ ಪರಿಸರದಲ್ಲೇ ವಾಸ್ತವ್ಯವಿದ್ದ ತಮಿಳು ಮೂಲದ ಕೂಲಿ ಕಾರ್ಮಿಕರೊಬ್ಬರ ಅಪ್ರಾಪ್ತ ವಯಸ್ಸಿನ ಮಗಳ ಜತೆ ಈತ ಪರಿಚಯ ಮಾಡಿಕೊಂಡು ಆಕೆಯನ್ನು ಪುಸಲಾಯಿಸಿ ಮನೆ ಹತ್ತಿರದ ಗುಡ್ಡೆಯಲ್ಲಿ ಅತ್ಯಾಚಾರವೆಸಗಿದ್ದ...
ದಕ್ಷಿಣ ಕನ್ನಡರಾಜಕೀಯಸುದ್ದಿ

‘ದ.ಕ. ಜಿಲ್ಲೆಗೆ 25 ಸಾವಿರ ಕೊವೀಡ್ ರ್‍ಯಾಪಿಡ್ ಟೆಸ್ಟ್‌ಕಿಟ್‌, 15 ಆಂಬುಲೆನ್ಸ್‌ ಪೂರೈಕೆ’ ; ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ – ಕಹಳೆ ನ್ಯೂಸ್

ಮಂಗಳೂರು, ಜು.17  : ದ.ಕ. ಜಿಲ್ಲೆಗೆ 25 ಸಾವಿರ ಕೊವೀಡ್ ರ್‍ಯಾಪಿಡ್ ಟೆಸ್ಟ್‌ಕಿಟ್‌, 15 ಆಂಬುಲೆನ್ಸ್‌ ಪೂರೈಕೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಅಶ್ವತ್‌ ನಾರಾಯಣ ಅವರು ಭರವಸೆ ನೀಡಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ತಿಳಿಸಿದ್ದಾರೆ. ಕೊರೊನಾ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ ಕುರಿತು ಉಪ ಮುಖ್ಯಮಂತ್ರಿಗಳಾದ ಅಶ್ವತ್‌ ನಾರಾಯಣ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಚರ್ಚೆ ನಡೆಸಿದ್ದು...
ಕ್ರೈಮ್ದಕ್ಷಿಣ ಕನ್ನಡಪುತ್ತೂರು

ಉಪ್ಪಿನಂಗಡಿಯ‌‌ಲ್ಲಿ ತಾಯಿ ಬೈದರೆಂದು ನೇಣಿಗೆ ಕೊರಳೊಡ್ಡಿದ 10ರ ಬಾಲೆ – ಕಹಳೆ ನ್ಯೂಸ್

ಉಪ್ಪಿನಂಗಡಿ‌‌, ಜು 17 : ಬಾಲಕಿಯೋರ್ವಳು ತಾಯಿ ಬೈದರೆಂದು ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೇಬಂಡಾಡಿ ಗ್ರಾಮದ ಕೇದಗೆದಡಿ ಎಂಬಲ್ಲಿ ಗುರುವಾರ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಕೇದಗೆದಡಿ ನಿವಾಸಿ ಬಾಲಚಂದ್ರ ಎಂಬವರ ಪುತ್ರಿ ಪ್ರಿಯಾ (10) ಎನ್ನಲಾಗಿದೆ. ಗುರುವಾರ ಸಂಜೆ ವೇಳೆ ತಲೆಕಟ್ಟಲು ಹೇಳಿದ್ದಕ್ಕೆ ತಾಯಿ ಬೈದರೆಂದು ಮುನಿಸಿಕೊಂಡು ಮನೆಯ ಶೌಚಾಲಯಕ್ಕೆ ತೆರಳಿದ್ದಳು. ಪ್ರಿಯಾ ಕಾಣಿಸದೇ ಇದ್ದ ಸಂದರ್ಭ ಮನೆಯವರು ಹುಡುಕಾಟ ನಡೆಸಿದಾಗ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ...
1 499 500 501 502 503 512
Page 501 of 512