ಸುಳ್ಯ ಸರಕಾರಿ ಆಸ್ಪತ್ರೆ ವೈದ್ಯರು, ನರ್ಸ್ ಗಳ ಸಹಿತ 6 ಮಂದಿಗೆ ಕೊರೊನಾ ಪಾಸಿಟಿವ್ ; ಆತಂಕದಲ್ಲಿ ಜನತೆ – ಕಹಳೆ ನ್ಯೂಸ್
ಸುಳ್ಯ: ಇಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯರು, ನರ್ಸ್ ಗಳು ಸೇರಿ ಒಟ್ಟು ಆರು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೆಲ ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಯೊಬ್ಬರಿಗೆ ಕೊರೊನಾ ಬಂದಿತ್ತು. ಬಳಿಕ ಅವರು ಮಂಗಳೂರಿಗೆ ಹೋಗಿದ್ದರು. ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ನರ್ಸ್ ಗೆ ಕೂಡಾ ಕೊರೊನಾ ದೃಢವಾಗಿತ್ತು. ಸರಕಾರಿ ಆಸ್ಪತ್ರೆಯ ಒಬ್ಬರು ವೈದ್ಯಾಧಿಕಾರಿ, ಮೂವರು ನರ್ಸ್ ಹಾಗೂ ಇಬ್ಬರು ಡಯಾಲಿಸಿಸ್ ವಿಭಾಗದ ತಂತ್ರಜ್ಞರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ...