ಎಡನೀರು ಶ್ರೀ ಮಠಕ್ಕೆ ಎಡತೊರೆ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಭೇಟಿ ; ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ಜೊತೆ ಸಂವಾದ – ಕಹಳೆ ನ್ಯೂಸ್
ಕಾಸರಗೋಡು : ಎಡನೀರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಕ್ಕೆ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರಾದ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಭೇಟಿ ನೀಡಿದ್ದಾರೆ. ಶ್ರೀಗಳಿಗೆ ಎಡನೀರು ಮಠದ ವತಿಯಿಂದ ಭವ್ಯ ಸ್ವಾಗತ ಮಾಡಲಾಗಿದ್ದು, 14 ರ ವರೆಗೆ ಮಠದಲ್ಲೇ ಮೊಕ್ಕಾಂ ಹೂಡಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳೊಂದಿಗೆ ಸಂವಾದವನ್ನು ನಡೆಸಿದ್ದು, ಆಧ್ಯಾತ್ಮ ಮತ್ತು ಮಠದ ಬಗ್ಗೆ ಕುಶಲೋಪರಿ ಮಾತುಕತೆಗಳನ್ನು ನಡೆಸಿದ್ದಾರೆ....