ಚುನಾವಣೆ ಸಂದರ್ಭದಲ್ಲೂ ಪರವಾನಿಗೆಯುಳ್ಳ ನಾಗರಿಕರ ಕೋವಿಗಳನ್ನು ಠಾಣೆಯಲ್ಲಿ ಇಡಬೇಕಿಲ್ಲ ; ಕೇರಳ ಹೈಕೋರ್ಟ್ ಮಹತ್ವದ ತೀರ್ಪು – ಕಹಳೆ ನ್ಯೂಸ್
ಕಾಸರಗೋಡು: ನಾಗರಿಕರ ವಶದಲ್ಲಿರುವ ಪರವಾನಿಗೆಯುಳ್ಳ ಕೋವಿಗಳನ್ನು ಚುನಾವಣೆಯ ಸಂದರ್ಭದಲ್ಲೂ ಪೊಲೀಸ್ ಠಾಣೆಗಳಲ್ಲಿ ಶೇಖರಿಸಿ ಇಡಲು ಅವಕಾಶವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಕಾಸರಗೋಡಿನ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು ಅವರು ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಕುರಿತು ನ್ಯಾಯಾಲಯ ಈ ತೀರ್ಪು ನೀಡಿದೆ. ಪ್ರಕರಣದ ವಿವರ: ಇತ್ತೀಚಿನ ಪಂಚಾಯತ್ ಚುನಾವಣೆ ವೇಳೆ, ಕಾಸರಗೋಡು ಜಿಲ್ಲಾಧಿಕಾರಿಗಳ ಆದೇಶದಂತೆ ಬದಿಯಡ್ಕ ಠಾಣಾ ಪೊಲೀಸರು, ಅರ್ಜಿದಾರರಾದ ನ್ಯಾಯವಾದಿ ಪ್ರದೀಪ್ ರಾವ್...