ದಕ್ಷಿಣ ಕನ್ನಡ ಜಿಲ್ಲೆಗೆ ಸಂಚಾರಕ್ಕೆ ಅನುಮತಿ – ರೆಗ್ಯುಲರ್ ಪಾಸ್ ಕೈಬಿಟ್ಟ ಕಾಸರಗೋಡು ಜಿಲ್ಲಾಡಳಿತ ; ಬಿಜೆಪಿ ಮುಖಂಡ, ನ್ಯಾಯವಾದಿ ಕೆ. ಶ್ರೀಕಾಂತ್ ರಿಟ್ ಅರ್ಜಿ ಪುರಸ್ಕರಿಸಿದ ಕೇರಳಾ ಹೈಕೋರ್ಟ್ – ತಲಪಾಡಿ ಸಹಿತ ಐದು ಪ್ರಮುಖ ಕೇರಳ – ಕರ್ನಾಟಕ ಗಡಿಗಳು ಓಪನ್ – ಕಹಳೆ ನ್ಯೂಸ್
ಕಾಸರಗೋಡು: ಅಂತಾರಾಜ್ಯ ಪ್ರಯಾಣ ಕುರಿತ ಕೇರಳ ಹೈಕೋರ್ಟ್ ಮಧ್ಯಂತರ ಆದೇಶದ ಬೆನ್ನಿಗೆ ತಲಪಾಡಿ ಸಹಿತ ಪಾಣತ್ತೂರು, ಮಾಣಿಮೂಲೆ, ಪೆರ್ಲ(ಸಾರಡ್ಕ) ಹಾಗೂ ಜಾಲ್ಸೂರು ಮಾರ್ಗಗಳ ಮೂಲಕ ಪಾಸ್ ರಹಿತವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಚಾರಕ್ಕೆ ಕಾಸರಗೋಡು ಜಿಲ್ಲಾಡಳಿತ ಅನುಮತಿ ಕಲ್ಪಿಸಿದೆ. ಇದುವರೆಗೆ ತಲಪಾಡಿ ಗೇಟ್ ಮೂಲಕ ಪಾಸ್ ಇದ್ದವರಿಗೆ ಮಾತ್ರ ದ.ಕ. ಜಿಲ್ಲೆ ಪ್ರವೇಶಕ್ಕೆ ಅವಕಾಶವಿತ್ತು. ಇತರ ಮಾರ್ಗಗಳಲ್ಲೂ ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ, ವಕೀಲ ಕೆ.ಶ್ರೀಕಾಂತ್ ಕೇರಳ ಹೈಕೋರ್ಟ್...