ಅಡಿಕೆ ನಳ್ಳಿ ಬೀಳುವ ಸಮಸ್ಯೆ : ಸಿಪಿಸಿಆರ್ ಐ ವಿಜ್ಞಾನಿಗಳ ತಂಡ ಅಡಿಕೆ ತೋಟಗಳಿಗೆ ಭೇಟಿ-ಕಹಳೆ ನ್ಯೂಸ್
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕಾಸರಗೋಡು ಜಿಲ್ಲೆಯ ಅಡಿಕೆ ತೋಟಗಳಲ್ಲಿ ಎಳೆ ಅಡಿಕೆ ಬೀಳುವುದು ಹಾಗೂ ಸಿಂಗಾರ ಒಣಗುವ ಸಮಸ್ಯೆ ಈ ಬಾರಿ ವಿಪರೀತವಾಗಿ ಕಂಡುಬಂದಿತ್ತು. ಕಳೆದ 2 ವರ್ಷಗಳಿಂದ ಈ ಸಮಸ್ಯೆ ಇದೆ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ವಿಟ್ಲದ ಸಿಪಿಸಿಆರ್ ಐ ವಿಜ್ಞಾನಿಗಳ ಗಮನಕ್ಕೆ ತಂದು, ಈ ಬಗ್ಗೆ ಸೂಕ್ತವಾದ ಅದ್ಯಯನ ಹಾಗೂ ಪರಿಹಾರ ಮಾರ್ಗ ಅಗತ್ಯವಾಗಿದೆ...