ಕೇರಳದ ವಯನಾಡ್ ಭೂಕುಸಿತ : ಮನೆ ಕೊಚ್ಚಿಕೊಂಡು ಹೋದರೂ ಪವಾಡ ಸದೃಶವಾಗಿ ಬದುಕುಳಿದ 40 ದಿನದ ಹೆಣ್ಣುಮಗು ಮತ್ತು ಆಕೆಯ ಆರು ವರ್ಷದ ಸಹೋದರ…!! – ಕಹಳೆ ನ್ಯೂಸ್
ವಯನಾಡ್ : ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಎರಡು ಗ್ರಾಮಗಳು ನಾಮಾವಶೇಷವಾಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಮನೆ ಕೊಚ್ಚಿಕೊಂಡು ಹೋದರೂ 40 ದಿನದ ಪುಟ್ಟ ಹೆಣ್ಣು ಮಗು ಮತ್ತು ಆಕೆಯ ಆರು ವರ್ಷದ ಸಹೋದರ ವಿಕೋಪದಲ್ಲಿ ಬದುಕಿ ಉಳಿದಿರುವ ಪವಾಡ ಸದೃಶ ಘಟನೆ ವರದಿಯಾಗಿದೆ. ಕುಟುಂಬದ ಆರು ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರೂ, ಅನಾರ ಮತ್ತು ಮುಹಮ್ಮದ್ ಹಯಾನ್ ಬದುಕಿ ಉಳಿದಿದ್ದಾರೆ....