ಅಯೋಧ್ಯೆಯಲ್ಲಿ ಎಡನೀರು ಶ್ರೀಗಳು ; ಬಾಲರಾಮ ದೇವರ ದರ್ಶನ ಹಾಗೂ ಮಂಡಲೋತ್ಸದಲ್ಲಿ ಭಾಗಿಯಾದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳು – ಕಹಳೆ ನ್ಯೂಸ್
ಉತ್ತರಪ್ರದೇಶ / ಕಾಸರಗೋಡು : ಕೇರಳದ ಏಕೈಕ ಶಂಕರಾಚಾರ್ಯ ಪೀಠದ ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳು ಅಯೋಧ್ಯೆಗೆ ಭೇಟಿ ನೀಡಿದ್ದು, ಬಾಲರಾಮ ದೇವರ ದರ್ಶನ ಪಡೆದಿದ್ದಾರೆ. ನಂತರ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುವ ಮಂಡಲೋತ್ಸವದಲ್ಲಿ ಭಾಗಿಯಾಗಿದ್ದಾರೆ. ಶ್ರೀಗಳ ಜೊತೆ ಮಠದ ಶಿಷ್ಯರು, ಕರ್ನಾಟಕ ಸರಕಾರದ ಮಾನವಹಕ್ಕುಗಳ ಆಯೋಗದ ಸದಸ್ಯರಾದ ಟಿ.ಶ್ಯಾಮ್ ಭಟ್ IAS, ಮಠದ ಮ್ಯಾನೇಜರ್ ರಾಜೇಂದ್ರ ಕಲ್ಲೂರಾಯ, ರಾಘವೇಂದ್ರ ಕೆದಿಲಾಯ ಸೇರಿದಂತೆ ಪ್ರಮುಖಗಳು ಭಾಗಿಯಾಗಿದ್ದರು....