ಕುಂಬಳೆಯಲ್ಲಿ ಪ್ರಥಮ ಪ್ರದರ್ಶನ ಕಂಡ “ಕಣಿಪುರ ಶ್ರೀ ಬಾಲಗೋಪಾಲ” ನೃತ್ಯ ರೂಪಕ -ಕಹಳೆ ನ್ಯೂಸ್
ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠಾ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಧಾನ ವೇದಿಕೆಯಲ್ಲಿ ಪುತ್ತೂರಿನ ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರು ನೃತ್ಯ ಸಂಯೋಜನೆ ಹಾಗೂ ನಿರ್ದೇಶನವನ್ನು ಮಾಡಿದ " ಶ್ರೀ ಬಾಲಗೋಪಾಲ" ಎನ್ನುವ ವಿನೂತನ ನೃತ್ಯ ರೂಪಕ ಪ್ರಪ್ರಥಮ ಬಾರಿಗೆ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರವಾಯಿತು. ನೃತ್ಯ ರೂಪಕ ಹಾಗೂ ಭರತನಾಟ್ಯ ಪ್ರದರ್ಶನದಲ್ಲಿ ಬದಿಯಡ್ಕ ಹಾಗೂ ಕುಂಬಳೆ ಶಾಖೆಯ ಸುಮಾರು 50...