ಶಾಲೆಗೆ ಲೆಗ್ಗಿನ್ಸ್ ಧರಿಸಿ ಬಂದ್ದಿದ್ದಕ್ಕೆ ನಿಂದಿಸಿ ಅನುಚಿತ ವರ್ತನೆ: ಫೋಟೋ ಸಮೇತ ದೂರು ನೀಡಿದ ಶಿಕ್ಷಕಿ – ಕಹಳೆ ನ್ಯೂಸ್
ಮಲಪ್ಪುರಂ: ಶಾಲೆಗೆ ಲೆಗ್ಗಿನ್ಸ್ ಧರಿಸಿಬಂದು ಪಾಠ ಮಾಡುತ್ತಿದ್ದ ಶಿಕ್ಷಕಿಯ ಜೊತೆ ಅನುಚಿತವಾಗಿ ನಡೆದುಕೊಂಡ ಮುಖ್ಯಶಿಕ್ಷಕಿಯ ವಿರುದ್ಧ ದೂರು ದಾಖಲಾಗಿದೆ. ಮಲಪ್ಪುರಂ ಜಿಲ್ಲೆಯ ಎಡಪಟ್ಟದಲ್ಲಿರುವ ಸಿಕೆಎಚ್ಎಂ ಸರ್ಕಾರಿ ಉನ್ನತ ಮಾಧ್ಯಮಿಕ ಶಾಲೆಯ ಶಿಕ್ಷಕಿ ಸರಿತಾ ರವೀಂದ್ರನಾಥ್ ಎಂಬುವರು ಜಿಲ್ಲಾ ಶಿಕ್ಷಣಾಧಿಕಾರಿಗೆ ದೂರು ದಾಖಲಿಸಿದ್ದಾರೆ. ಅಂದಹಾಗೆ ಸರಿತಾ ಅವರು ಕೇವಲ ಶಿಕ್ಷಕಿ ಮಾತ್ರವಲ್ಲ, ಮಿಸಸ್ ಕೇರಳ ವಿಜೇತೆಯು ಹೌದು. ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಸರಿತಾ ಸೇವೆ ಸಲ್ಲಿಸುತ್ತಿದ್ದಾರೆ. ದೂರಿನಲ್ಲಿರುವ ಪ್ರಕಾರ ಲಗ್ಗಿನ್ಸ್ ಧರಿಸಿ ಬಂದಿದ್ದ...