ಪ್ಯಾರಿಸ್ ಒಲಿಂಪಿಕ್ಸ್‌ನ ಓಟದ ಸ್ಪರ್ಧೆಯಲ್ಲಿ ಭರವಸೆ ಹೆಚ್ಚಿದ ಕೊಡಗಿನ ರಾಣಿ ಎಂ.ಆರ್. ಪೂವಮ್ಮ – ಕಹಳೆ ನ್ಯೂಸ್
ಮಚ್ಚೆಟ್ಟಿರ ರಾಜು ಪೂವಮ್ಮ (ಎಂ.ಆರ್. ಪೂವಮ್ಮ) ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತೀಯ ಅತ್ಲೆಟಿಕ್ಸ್ ಪ್ರಪಂಚದ ಚಿರಪರಿಚಿತ ಹೆಸರು. ಕೊಡಗಿನ ಗೋಣಿಕೊಪ್ಪದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಪೂವಮ್ಮ, ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಹೈಸ್ಕೂಲು ದಿನಗಳಿಂದ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿಕೊಂಡು, ಪ್ರಾರಂಭದಲ್ಲಿ 100 ಮೀ. ಆನಂತರ, 400 ಮೀ. ಓಟದಲ್ಲಿ ರಾಜ್ಯ, ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಆರಂಭದಿಂದಲೂ ಸೂಕ್ತ ಪ್ರೋತ್ಸಾಹದ ಕೊರತೆ ಇದ್ದುದರಿಂದ ಪೂವಮ್ಮ ಅವರಿಗೆ ವಿಶ್ವ ಚಾಂಪಿಯನ್‌ಶಿಪ್‌ಗೆ...