ಗೋಪಾಲಪುರ ಚರ್ಚ್ ನಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದ ಜೋಸೆಫರ ಹಬ್ಬ-ಕಹಳೆ ನ್ಯೂಸ್
ಕೊಡಗು : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ಗೋಪಾಲಪುರ ಚರ್ಚ್ ನಲ್ಲಿ ಸಂತ ಜೋಸೆಫರ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು ಭಾನುವಾರದ ಬೆಳಗಿನ ಬಲಿಪೂಜೆಯನ್ನು 10.30ಗಂಟೆಗೆ ಪ್ರಾರಂಭಿಸಿ ಮೊದಲಿಗೆ ಜೋಸೆಫರ ಪ್ರತಿಮೆಯನ್ನು ಚರ್ಚಿನ ಸುತ್ತಲೂ ಮೆರವಣಿಗೆ ಮುಖಾಂತರ ಕೊಂಡೊಯ್ಯಲಾಯಿತು. ಸರಿಯಾಗಿ ಹನ್ನೊಂದು ಗಂಟೆಗೆ ಬಲಿಪೂಜೆ ನೆರವೇರಿತು. ಬಲಿಪೂಜೆಯಲ್ಲಿ ಚರ್ಚ್ ನ ಫಾದರ್ ಜಾಕಬ್ ಕೊಳನೂರು ಪ್ರಬೋಧನೆ ನೀಡುತ್ತಾ ಸಂತ ಜೋಸೆಫರು ದೇವರಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಇಟ್ಟುಕೊಂಡ...