ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ವಿಜಯೀಭವ ಕಾರ್ಯಾಗಾರ ; ಅಧ್ಯಯನವನ್ನು ಆಸ್ವಾದಿಸುವ ಮನೋಭಾವ ಬೆಳೆಯಬೇಕು : ಮನಿಷಾ ಐಪಿಎಸ್-ಕಹಳೆ ನ್ಯೂಸ್
ಪುತ್ತೂರು: ಯುಪಿಎಸ್ಸಿ ಪರೀಕ್ಷೆಗಳು ದೇಶದ ಅತ್ಯಂತ ಕಠಿಣ ಪರೀಕ್ಷೆಗಳೆಂದು ಗುರುತಿಸಲ್ಪಟ್ಟಿವೆ. ಹಾಗೆಂದು ಈ ಪರೀಕ್ಷೆಗಳನ್ನು ತೇರ್ಗಡೆಯಾಗುವುದು ಅಸಾಧ್ಯ ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಕಠಿಣ ಪರಿಶ್ರಮ, ನಿಗದಿತ ಸಿದ್ಧತೆ ಹಾಗೂ ರಚನಾತ್ಮಕ ಓದು ನಮ್ಮನ್ನು ಯಶಸ್ಸಿನೆಡೆಗೆ ಒಯ್ಯಬಲ್ಲವು ಎಂದು ದಕ್ಷಿಣ ಕನ್ನಡದ ಐಪಿಎಸ್ ಪ್ರೊಬೆಷನರಿ ಮನಿಷಾ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ತಾಲೂಕು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ವಿಜಯ ಕರ್ನಾಟಕ...