ಉಡುಪಿಯಲ್ಲಿ ಮೂರು ವಿಭಿನ್ನ ಬಣ್ಣಗಳು ಸೇರಿದಂತೆ ನಾಲ್ಕು ಕಲರ್ ನ ಕಲ್ಲಂಗಡಿ ಕೃಷಿಯನ್ನು ಮಾಡಿ ಯಶಸ್ವಿ-ಕಹಳೆ ನ್ಯೂಸ್
ಉಡುಪಿ: ಕಲ್ಲಂಗಡಿ ಹಣ್ಣು ಅಂದರೆ ಎಲ್ಲರಿಗೂ ಬಹಳ ಪ್ರಿಯವಾದ ಹಣ್ಣು.ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ಕಾಣ ಸಿಗುವುದು ಕೆಂಪು ಬಣ್ಣದಲ್ಲಿ ಮಾತ್ರ.ಉಡುಪಿ ಜಿಲ್ಲೆಯ ಕೃಷಿಕರಾದ ಹಿರಿಯಡ್ಕದ ಪ್ರಗತಿಪರ ಕೃಷಿಕ ಸುರೇಶ್ ನಾಯಕ್ ಮತ್ತು ಮಟ್ಟುವಿನ ಯಶೋದರ್ ಉಡುಪಿಯಲ್ಲಿ ಮೂರು ವಿಭಿನ್ನ ಬಣ್ಣಗಳು ಸೇರಿದಂತೆ ನಾಲ್ಕು ಕಲರ್ ನ ಕಲ್ಲಂಗಡಿ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದಾರೆ. ಕೃಷಿಕ ಯಶೋದರ್ ಅವರ ಸಾಧನೆ ಮೆಚ್ಚಲೆಬೇಕು. ಹೆಚ್ಚಾಗಿ ಮಟ್ಟು ಪ್ರದೇಶಕ್ಕೆ ಸಮುದ್ರ ಹತ್ತಿರವಾಗಿರುವುದರಿಂದ ಈ ಪ್ರದೇಶವು ಉಪ್ಪಿ...