ಉಡುಪಿಯಲ್ಲಿ ಮಳೆಯ ನಡುವೆಯೂ ನಡೆಯಿತು ದೈವದ ನೇಮ -ಕಹಳೆ ನ್ಯೂಸ್
ಉಡುಪಿ : ಸುಡುಬಿಸಿಲಿನಿಂದ ಕಂಗೆಟ್ಟಿರುವ ಕರಾವಳಿಯಲ್ಲಿ ವರುಣಾಗಮನ ತಂಪೆರೆದಿದೆ. ಆದರೆ, ದಿಢೀರ್ ಆಗಿ ಸುರಿಯುವ ಮಳೆಯಿಂದಾಗಿ ಹಲವೆಡೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಮುಖವಾಗಿ ಜಾತ್ರೋತ್ಸವಗಳು ನಡೆಯುತ್ತಿರುವ ಊರುಗಳಲ್ಲಿ ಮಳೆಯಿಂದಾಗಿ ದೇವರ ಉತ್ಸವಕ್ಕೆ ಮಳೆ ಅಡ್ಡಿ ಪಡಿಸಿದ್ರೆ, ಜಾತ್ರೆಯ ವ್ಯಾಪಾರಿಗಳು ಪರದಾಡುವಂತೆ ಮಾಡಿದೆ. ಇದೀಗ ಅಂತಹುದೇ ಒಂದು ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ. ದೈವದ ನೇಮವೊಂದಕ್ಕೆ ಮಳೆ ವಿಘ್ನ ತಂದೊಡ್ಡಿದೆ. ಸಾಮಾನ್ಯವಾಗಿ ಮಳೆ ಸಂಜೆ ಸುರಿಯುತ್ತಿದ್ದಾದ್ರೂ ಇಂದು ಮುಂಜಾನೆಯೇ ಎಂಟ್ರಿ ಕೊಟ್ಟಿದ್ದಾನೆ....