ಎಕ್ಸಲೆಂಟ್ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ -ಕಹಳೆ ನ್ಯೂಸ್
ಮೂಡುಬಿದಿರೆ : ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಯುವಪೀಳಿಗೆಗೆ ದಾರಿದೀಪವಾಗಬೇಕು. ತನ್ನ ಯೌವ್ವನದಲ್ಲಿ ರಾಷ್ಟ್ರಿಯ ಚಿಂತನೆಯನ್ನು ಮೈಗೂಡಿಸಿಕೊಂಡು ಯುವ ಸಮೂಹಕ್ಕೆ ಸ್ಫೂರ್ತಿಯ ಸೆಳೆಯಾದ ವಿವೇಕಾನಂದರ ಜೀವನ ನಿಜಕ್ಕೂ ಸಾರ್ಥಕ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಬಿ.ಪಿ ಸಂಪತ್ ಕುಮಾರ್ ಅಭಿಪ್ರಾಯಪಟ್ಟರು. ಎಕ್ಸಲೆಂಟ್ ಸಿಬಿಎಸ್ಇ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅವರು ವಿವೇಕಾನಂದರು ಭಾರತ ದೇಶ ಕಂಡ ಮಹಾನ್ ಯುಗಪುರುಷ, ಸಂತ ಮತ್ತು ಬೌದ್ಧಿಕ...