Thursday, December 5, 2024

ಜಿಲ್ಲೆ

ದಕ್ಷಿಣ ಕನ್ನಡಬೆಳ್ತಂಗಡಿ

ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರೀ ವರ್ಗಾವಣೆ ; ಹೊಸ ತಹಶೀಲ್ದಾರ್ ಆಗಿ ಮಹೇಶ್.ಜೆ ನೇಮಕ – ಕಹಳೆ ನ್ಯೂಸ್

ಬೆಳ್ತಂಗಡಿ: ತಹಶೀಲ್ದಾರ್ ಗಣಪತಿ ಶಾಸ್ತ್ರೀ ಯವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಹಾಗೆಯೆ ಬೆಳ್ತಂಗಡಿಗೆ ಹೊಸ ತಹಶೀಲ್ದಾರ್ ಆಗಿ ಚಾಮರಾಜನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್.ಜೆ ರನ್ನು ನೇಮಕ ಮಾಡಲಾಗಿದೆ....
ದಕ್ಷಿಣ ಕನ್ನಡಬೆಳ್ತಂಗಡಿ

ಚಾರ್ಮಾಡಿ ಘಾಟಿಯಲ್ಲಿ ಅಕ್ರಮ ಗೋಸಾಗಾಟಕ್ಕೆ ಬ್ರೇಕ್ ಹಾಕಿದ ಖಡಕ್ ಎಸ್.ಐ. ಪವನ್ ಕುಮಾರ್ ; ಆರೋಪಿ ಅಝರುದ್ದೀನ್ ಸಹಿತ ಮೂವರು ಗೋ ಕಳ್ಳರು ಅಂದರ್..! – ಕಹಳೆ ನ್ಯೂಸ್

ಬೆಳ್ತಂಗಡಿ : ಅಕ್ರಮ ಗೋಸಾಗಾಟಕ್ಕೆ ಬೆಳಂಬೆಳಗ್ಗೆ‌ ಧರ್ಮಸ್ಥಳ ಪೋಲೀಸರು ಬ್ರೇಕ್ ಹಾಕಿದ್ದಾರೆ. ಚಿತ್ರದುರ್ಗದಿಂದ ನೆಚ್ಛೆಪದವು, ವರ್ಕಾತಿ ಕೇರಳಕ್ಕೆ ಲಾರಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧಾರದಲ್ಲಿ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಧರ್ಮಸ್ಥಳ ಠಾಣೆಯ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್ ನೇತೃತ್ವದಲ್ಲಿ ಲಾರಿ ಮತ್ತು ದನವನ್ನು ವಶಪಡಿಸಿ ಕೊಂಡಿದ್ದಾರೆ. ಈ ಸಂಧರ್ಭದಲ್ಲಿ ಆರೋಪಿಗಳಾದ ಮಹಮ್ಮದ್ ಹಫೀಜ್, ಮಹಮ್ಮದ್ ಅಝರುದ್ದೀನ್ ಹಾಗೂ ಡ್ರೈವರ್ ನರೇಶ್ ಇವರನ್ನು ಪೊಲೀಸರು ವಶಕ್ಕೆ...
ದಕ್ಷಿಣ ಕನ್ನಡರಾಜಕೀಯಸುದ್ದಿ

Breaking News : ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ವೈ. ಸೂಚನೆ ; ಒಂದೇ ವರ್ಷದಲ್ಲಿ ಪೂರ್ಣಗೊಳ್ಳಲಿದೆಯಂತೆ ಯೋಜನೆ – ಕಹಳೆ ನ್ಯೂಸ್

ಬೆಂಗಳೂರು: ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆ.ಸಿ.ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಸಿತು. ಕೆ.ಸಿ. ವ್ಯಾಲಿ ಯೋಜನೆಯಡಿ ಬೆಂಗಳೂರು ನಗರದಿಂದ 400 ಎಂ ಎಲ್ ಡಿ ಸಂಸ್ಕರಿಸಿದ ನೀರನ್ನು ಕೋಲಾರ ಜಿಲ್ಲೆಗೆ ಒದಗಿಸಬೇಕಾಗಿದೆ. ಆದರೆ ಪ್ರಸ್ತುತ ಕೇವಲ 284 ಎಂ ಎಲ್ ಡಿ ನೀರು ಮಾತ್ರ ಲಭ್ಯವಿದೆ. ಮಳೆ ನೀರು ಸಾಕಷ್ಟು ಪ್ರಮಾಣದಲ್ಲಿ ಒಳಚರಂಡಿ ಸೇರದೆ, ಸಂಸ್ಕರಣೆಗೆ ಲಭ್ಯವಾಗುತ್ತಿಲ್ಲ....
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

Breaking News : ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರ ಶಿಶಿಲೇಶ್ವರ ದೇವಸ್ಥಾನದಲ್ಲಿ ದೇವರ ಮೀನುಗಳ ಕಳ್ಳತನ ; ಮಸೀದಿ ಮೌಲ್ವಿ ಸಹಿತ 7 ಮಂದಿ ದುಷ್ಟರನ್ನು ರೆಡ್ ಹ್ಯಾಂಡ್ ಹಿಡಿದ ಹಿಂದೂ ಜಾಗರಣಾ ವೇದಿಕೆ – ಕಹಳೆ ನ್ಯೂಸ್

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ದೇವರ ಮೀನುಗಳ ತಾಣ ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರ ಶಿಶಿಲೇಶ್ವರ ದೇವಸ್ಥಾನದಲ್ಲಿ ಮೀನುಗಳನ್ನು ಕಳ್ಳತನ ಮಾಡುತ್ತಿದ್ದ ಮಸೀದಿಯ ಧರ್ಮಗುರು/ ಮೌಲ್ವಿ ಸಹಿತ 7 ಮಂದಿಯನ್ನು ಸ್ಥಳೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಶ್ರೀ ಶಿಶಿಲೇಶ್ವರ ದೇವಾಲಯದ ದೇವರ ಕೆರೆ ಕಪಿಲ ಕೆರೆಯಲ್ಲಿ ಕಳೆದ ಹಲವು ಸಮಯದಿಂದ ಮೀನುಗಳನ್ನು ರಾತ್ರಿ ವೇಳೆ ಕದ್ದು...
ದಕ್ಷಿಣ ಕನ್ನಡಸುದ್ದಿ

ಉಪ್ಪಿನಂಗಡಿಯ ಜನತೆಗೆ ಗುಡ್ ನ್ಯೂಸ್ : ಜೂ.24ರಂದು ಉಪ್ಪಿನಂಗಡಿಯಲ್ಲಿ ಶುಭಾರಂಭಗೊಳ್ಳಲಿದೆ ಉಪ್ಪಿನಂಗಡಿಯ ಅತೀದೊಡ್ಡ ವಸ್ತ್ರಮಳಿಗೆ ” ಶ್ರೀದುರ್ಗಾ ಟೆಕ್ಸ್‌ಟೈಲ್ಸ್ & ರೇಡಿಮೇಡ್ಸ್ ” – ಕಹಳೆ ನ್ಯೂಸ್

ಬೆಳ್ತಂಗಡಿ: ಕಳೆದ 5 ವರ್ಷಗಳಿಂದ ನಗುಮೊಗದ ಸೇವೆ ಹಾಗೂ ಗುಣಮಟ್ಟದ ವಸ್ತ್ರಗಳಿಗೆ ಮನೆ ಮಾತಾಗಿರುವ ಗ್ರಾಹಕರ ಪ್ರೀತಿ ವಿಶ್ವಾಸವನ್ನು ಗಳಿಸಿ, ಬೆಳ್ತಂಗಡಿ, ಉಜಿರೆ, ಮಡಂತ್ಯಾರು, ಬಂಟ್ವಾಳದಲ್ಲಿ ತನ್ನ ವಸ್ತ್ರಮಳಿಗೆಯನ್ನು ವಿಸ್ತರಿಸಿ ಇದೀಗ ನೂತನವಾಗಿ ಉಪ್ಪಿನಂಗಡಿ ಹಸನ್ ಟವರ್ಸ್ ನಲ್ಲಿ ಪ್ರಾರಂಭಿಸುವ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನ ನೂತನ ಸಂಸ್ಥೆ ಜೂ.24 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.‌ ಪುತ್ತೂರು ಶಾಸಕ ಸಂಜೀವ ಮಠಂದೂರು ಸಂಸ್ಥೆಯ ಉದ್ಘಾಟನೆ ನೇರವೇರಿಸಲಿದ್ದು, ಮುಖ್ಯ...
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯಸುಳ್ಯ

ಪ್ಯೂರ್ ಪ್ರೇಯರ್ ಸಂಸ್ಥೆ ಅವ್ಯವಹಾರ ನಡೆಸಿದೆ ಎನ್ನುವ ವಿಚಾರ ; ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನ್‍ಲೈನ್ ಸೇವೆಗಳ ನಿರ್ವಹಣೆ ಫ್ಯೂರ್ ಪ್ರೇಯರ್ ಸಂಸ್ಥೆಗಿಲ್ಲ – ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ – ಕಹಳೆ ನ್ಯೂಸ್

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಆನ್‍ಲೈನ್ ಸೇವೆಗಳ ನಿರ್ವಹಣೆಯಿಂದ ಪ್ಯೂರ್ ಪ್ರೇಯರ್ ಸಂಸ್ಥೆಯನ್ನು ಮುಕ್ತಗೊಳಿಸಲಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಾನು ಮುಜರಾಯಿ ಸಚಿವನಾಗಿ ಆಯ್ಕೆಯಾಗುವ ಮೊದಲೇ ರಾಜ್ಯದ 54 ದೇವಸ್ಥಾನಗಳ ಸೇವೆಯನ್ನು ಆನ್ ಲೈನ್ ಮೂಲಕ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕಾಗಿ ಸರ್ವೆಯನ್ನೂ ನಡೆಸಲಾಗಿದ್ದು, ಪ್ಯೂರ್ ಪ್ರೇಯರ್ ಸಂಸ್ಥೆಗೆ 15 ಜಿಲ್ಲೆಗಳ ದೇವಸ್ಥಾನಗಳನ್ನು ಬಿಟ್ಟುಕೊಡಲಾಗಿತ್ತು. ಉಳಿದ ಜಿಲ್ಲೆಗಳ ಸರ್ವೇ ಕಾರ್ಯವನ್ನು ಇನ್ನಷ್ಟೇ ಮಾಡಬೇಕಿದೆ. ಈ ನಡುವೆ...
ದಕ್ಷಿಣ ಕನ್ನಡವಾಣಿಜ್ಯ

ಕಾರು ಪ್ರೀಯರಿಗೆ ಗುಡ್ ನ್ಯೂಸ್ ; ಡಿಜಿಟಲ್ ಲಾಂಚ್ ಮೂಲಕ ರೆನಾಲ್ಟ್ `ಟ್ರೈಬರ್ ಎಎಂಟಿ’ ಮಾರುಕಟ್ಟೆಗೆ ಲಗ್ಗೆ – ಕಹಳೆ ನ್ಯೂಸ್

ಮಂಗಳೂರು: `ರೆನಾಲ್ಟ್’ ವಾಹನ ತಯಾರಿಕಾ ಸಂಸ್ಥೆಯು ತನ್ನ ಹೊಸ ಟ್ರೈಬರ್ ಎ.ಎಂ.ಟಿ. ಕಾರುಗಳನ್ನು ಬಿಡುಗಡೆ ಮಾಡಿದ್ದು ನಗರದ ಬಂಗ್ರಕೂಳೂರಿನ ಶೋರೂಂನಲ್ಲಿ ನೂತನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮೆನೇಜಿಂಗ್ ಡೈರೆಕ್ಟರ್ ಗಳಾದ ಮಿಥುನ್ ಚೌಟ, ಅರುಣ್ ಮೆಂಡಿಸ್, ಬ್ಯುಸಿನೆಸ್ ಹೆಡ್ ಮುಹಮ್ಮದ್ ರಿಝ್ವಾನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೊದಲ ಮೂರು ಗ್ರಾಹಕರಾದ ಪ್ರಕಾಶ್ ಬಿ.ಟಿ., ಪ್ರಕಾಶ್ ನಾರಾಯಣ್, ಜೀವನ್ ಮೋಹನ್ ದಾಸ್ ಅವರಿಗೆ ಕಾರ್ ಗಳನ್ನು ವಿತರಿಸಲಾಯಿತು....
ಉಡುಪಿಕಾಸರಗೋಡುಜಿಲ್ಲೆದಕ್ಷಿಣ ಕನ್ನಡಸುದ್ದಿ

ಅಕ್ಷರಶಃ ನಿಜವಾಗುತ್ತಿದೆ ಕಹಳೆ ನ್ಯೂಸ್ ಸಮೀಕ್ಷೆ – ಅಡಿಕೆ ಬೆಳೆಗಾರರಿಗೆ ಬಿಗ್ ಗುಡ್ ನ್ಯೂಸ್ : ದಾಸ್ತಾನು ಕೊರತೆಯಿಂದ ಅಡಿಕೆ ದರ ದಿನದಿಂದ ದಿನಕ್ಕೆ ಏರಿಕೆ, 320 – 350 ರ ಆಸುಪಾಸಿನಲ್ಲಿ ಅಡಿಕೆ ಖರೀದಿ – ಕಹಳೆ ನ್ಯೂಸ್

ಮಂಗಳೂರು : ಕರಾವಳಿ ಪ್ರಮುಖ ಬೆಳೆ ಅಡಿಕೆ, ಲಕ್ಷಾಂತರ ಕೃಷಿಕರು ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವ ನಡೆಸುತ್ತಿದ್ದಾರೆ, ಇಂತಹ ರೈತಾಪಿ ವರ್ಗಕ್ಕೆ ಲಾಕ್ ಡೌನ್ ನಂತರ ಗುಡ್ ನ್ಯೂಸ್ ಒಂದು ಬಂದಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಹೆಚ್ಚಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅಡಿಕೆ ಧಾರಣೆಯು ಕೆಜಿಗೆ 350, 400 ಆಗುವ ನಿರೀಕ್ಷೆ ಹೆಚ್ಚಾಗಿದೆ ಎಂಬ ವರದಿಯನ್ನು ಕಹಳೆನ್ಯೂಸ್ ಪ್ರಸಾರ ಮಾಡಿತ್ತು, ವರದಿ ಪ್ರಸಾರಕ್ಕೂ ಮುನ್ನ...
1 583 584 585 586 587
Page 585 of 587