” ಚೀನಾ ನರಿ ಬುದ್ದಿಗೆ ಭಾರತ ತಕ್ಕ ಉತ್ತರ ಕೊಡಲಿದೆ ” – ಪುತ್ತೂರಿನಲ್ಲಿ ಹುತಾತ್ಮ ಭಾರತೀಯ ಯೋಧರಿಗೆ ಅಮರ್ ಜವಾನ್ ಜ್ಯೋತಿ ಬಳಿ ಬಿಜೆಪಿ ಶ್ರದ್ಧಾಂಜಲಿ ; ಪ್ರಧಾನಿ ನಡೆ ಸಮರ್ಥನೆ, ಶ್ಲಾಘನೆ – ಕಹಳೆ ನ್ಯೂಸ್
ಪುತ್ತೂರು : ಗಾಲ್ವನ್ ಕಣಿವೆಯಲ್ಲಿ ನಡೆದ ಘರ್ಷನೆಯಲ್ಲಿ ಹುತಾತ್ಮರಾದ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿವರಿಗೆ ಬೆಂಬಲವಾಗಿ ನಾವು ಚೀನಾ ವಿರೋಧವನ್ನು ಕೇವಲ ಮಾತಿನಲ್ಲಿ ಹೇಳದೆ ಕೃತಿಯಲ್ಲೂ ಮಾಡಿ ತೋರಿಸಬೇಕು. ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂದು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿದರು. ಜೂ.೧೬ರಂದು ಗಡಿಯಲ್ಲಿ ಚೀನಾದೊಂದಿಗೆ ನಡೆದ ಘರ್ಷನೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಇಲ್ಲಿನ ಕಿಲ್ಲೆ ಮೈದಾನದ ಅಮರ್...