Saturday, April 12, 2025

ಜಿಲ್ಲೆ

ಮಂಡ್ಯ

ಯಾರಪ್ಪ ಅವರೆಲ್ಲ? ಅದ್ಯಾರೋ ನನಗೆ ಗೊತ್ತಿಲ್ಲ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ-ಕಹಳೆ ನ್ಯೂಸ್

ಮಂಡ್ಯ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಹಣಕಾಸು ವ್ಯವಹಾರವೊಂದರಲ್ಲಿ ಸಿಲುಕಿ, ಸಿಸಿಬಿ ವಿಚಾರಣೆಗೆ ಒಳಪಟ್ಟಿರುವ ಸ್ಯಾಂಡಲ್‍ವುಡ್ ನಟಿ ರಾಧಿಕಾ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇಂದು ಶ್ರೀರಂಗಪಟ್ಟಣದ ನೇರಳೆಕೆರೆ ಗ್ರಾಮಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಬಳಿ, ರಾಧಿಕಾಗೆ ಸಿಸಿಬಿ ನೋಟಿಸ್ ಬಂದಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದಂತೆ, ಯಾರಪ್ಪ ಅವರೆಲ್ಲ? ಅದ್ಯಾರೋ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲ, ನನಗೆ ಸಂಬಂಧಪಡದ ವಿಚಾರ ಕೇಳಲೇಬೇಡಿ ಎನ್ನುತ್ತ ಅಲ್ಲಿಂದ ಹೊರಟೇಹೋದರು....
ಮೈಸೂರು

ಪ್ರೇಮಕುಮಾರಿಗೆ ವಂಚನೆ ಪ್ರಕರಣದಲ್ಲಿ ಶಾಸಕ ರಾಮದಾಸ್‍ಗೆ ನಿರೀಕ್ಷಣಾ ಜಾಮೀನು-ಕಹಳೆ ನ್ಯೂಸ್

ಮೈಸೂರು: ಮೈಸೂರು ಶಾಸಕ ರಾಮದಾಸ್ ಅವರು ಪ್ರೇಮಾಕುಮಾರಿಗೆ ವಂಚನೆ ನಡೆಸಿ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಿಲ್ಲಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ರಾಮದಾಸ್ ಹಾಗೂ ಪ್ರೇಮಕುಮಾರಿ ಅವರ ರಾಜ್ಯದಾದ್ಯಂತ ಬಾರೀ ಸುದ್ದಿಯಾಗಿದ್ದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರೇಮಾಕುಮಾರಿ ಪ್ರಕರಣದಲ್ಲಿ ರಾಮದಾಸ್ ಅವರ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಮೈಸೂರಿನ ರಸ್ವತಿಪುರಂ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಪೊಲೀಸರು ಸಲ್ಲಿಸಿದ್ದ ವರದಿಯನ್ನು...
ಉಡುಪಿ

ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತಾಡಿ ಭಾಗದಲ್ಲಿ ಗೋರಿಲ್ಲಾ ಪ್ರತ್ಯಕ್ಷ-ಕಹಳೆ ನ್ಯೂಸ್

ಉಡುಪಿ: ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತಾಡಿ ಭಾಗದಲ್ಲಿ ಗೋರಿಲ್ಲಾ ಕಾಣಿಸಿಕೊಂಡಿದೆ. ಈಗಾಗಲೇ ಸಾಮಾನ್ಯವಾಗಿ ಎಲ್ಲಾ ಕಡೆ ಚಿರತೆ, ಕಾಡುಕೋಣ ಗೋಚರಿಸುತ್ತಿತ್ತು. ಆದರೆ ಇದೀಗ ಗೋರಿಲ್ಲಾ ಕಾಣಿಸಿಕೊಂಡಿದೆ. ಈ ಗೋರಿಲ್ಲಾ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಅರಣ್ಯ ಇಲಾಖೆ ಅಧಿಕಾರಿ ಹರೀಶ್ ನೇತೃತ್ವದಲ್ಲಿ ಶೋಧ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೋರಿಲ್ಲಾ ಹೆಜ್ಜೆ ಗುರುತು ಕಾಣಿಸಿದ್ದು, ಸುಮಾರು ಎಂಟು ಎಕರೆ ವಿಸ್ತೀರ್ಣದ...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳ

ಪೆರುವಾಯಿ: ಬೈಕ್ ಅಪಘಾತಕ್ಕೀಡಾದ ವಿವೇಕಾನಂದ ಕಾಲೇಜು ಹಳೆ ವಿದ್ಯಾರ್ಥಿ ಶಿವಪ್ರಸಾದ್ ರವರ ಚಿಕಿತ್ಸೆಗಾಗಿ ಅರ್ಥಿಕ ನೆರವಿಗೆ ಮನವಿ-ಕಹಳೆ ನ್ಯೂಸ್

ಪುತ್ತೂರು: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕನ್ನರಡ್ಕ ನಿವಾಸಿ ಕೆ.ಆರ್. ಶಿವಪ್ರಸಾದ್ (22 ವರ್ಷ) ರವರಿಗೆ ಜ.5ರಂದು ಮಂಗಳೂರಿನ ಕೊಟ್ಟಾರ ಚೌಕಿ ಬಳಿ ಬೈಕ್ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡು ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಪುತ್ತೂರು ವಿವೇಕಾನಂದ ಕಾಲೇಜಿನ ಹಳೆವಿದ್ಯಾರ್ಥಿಯಾಗಿದ್ದು ಎಬಿವಿಪಿಯಲ್ಲಿ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದರು.ಬೈಕ್ ಬಿದ್ದ ರಭಸಕ್ಕೆ ಅವರ ತಲೆಯ ಭಾಗಕ್ಕೆ ಬಲವಾದ ಏಟು ಬಿದ್ದಿದ್ದು, ದೇಹದ ಹಲವು ಭಾಗಗಳಲ್ಲಿ ತೀವ್ರವಾಗಿ ಗಾಯಗೊಂಡು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಇದೀಗ ವೈದ್ಯರು ಚಿಕಿತ್ಸೆಗಾಗಿ...
ದಕ್ಷಿಣ ಕನ್ನಡಸುದ್ದಿ

ಕಡಬದ ಜ್ಯೂಸ್ ಸೆಂಟರ್ ಗೆ ಬಂದಿದ್ದ ಹುಡುಗಿಯ ಫೋಟೊ ತೆಗೆದ ಅನ್ಯಕೋಮಿನ ಜಿಹಾದಿ ಯುವಕ..! ಕಡಬದಲ್ಲಿ ಬಿಗುವಿನ ವಾತಾವರಣ ; ಸಿಡಿದೆದ್ದ ಹಿಂದೂ ಸಂಘಟನೆಗಳು – ಕಹಳೆ ನ್ಯೂಸ್

ಕಡಬ : ಜ್ಯೂಸ್ ಸೆಂಟರ್ ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಫೋಟೊವನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕ ತೆಗೆದ ಘಟನೆಗೆ ಸಂಬಂಧಿಸಿ ಜ್ಯೂಸ್ ಸೆಂಟರ್ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದರು. ಇಂದು ಸಂಜೆ ಈ ಘಟನೆ ನಡೆದಿದ್ದು, ಅನ್ಯಕೋಮಿನ ವ್ಯಕ್ತಿ ಜ್ಯೂಸ್ ಸೆಂಟರ್ ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಪೋಟೊ ತೆಗೆದು ತನ್ನ ವಾಟ್ಸಪ್ ನಲ್ಲಿ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸಹಿತ ಅನೇಕರು ಜಮಾಯಿಸಿದರು....
ಹುಬ್ಬಳ್ಳಿ

ಹುಬ್ಬಳ್ಳಿಯ ಕಿಮ್ಸ್ ಆಸ್ವತ್ರೆಯ ಶವಾಗಾರ ಸಿಬ್ಬಂದಿ ನೇಣಿಗೆ ಶರಣು-ಕಹಳೆ ನ್ಯೂಸ್

ಹುಬ್ಬಳ್ಳಿ: ಕಿಮ್ಸ್ ನ ಶವಾಗಾರ ಸಿಬ್ಬಂದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬಿಡನಾಳ ಬಳಿಯ ಸೋನಿಯಾ ಗಾಂಧಿ ನಗರದ ಲಕ್ಷ್ಮಣ ಗೂಳಪ್ಪ ದೊಡ್ಡಮನಿ ಎಂದು ತಿಳಿದುಬಂದಿದೆ. ಇತ ಕ್ಷುಲ್ಲಕ ವಿಷಯವಾಗಿ ಮಗನೊಂದಿಗೆ ಜಗಳವಾಗಿದ್ದಕ್ಕೆ ಮನನೊಂದು ಪಕ್ಕದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಅಲ್ಲದೇ ಕಿಮ್ಸ್ ನ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಉಡುಪಿ

ಉಡುಪಿಯ ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಹೊಸ ವರ್ಷದ ಸಂದೇಶ ಬರೆಯುವಾಗ ಭೀಕರ ಅಪಘಾತ; ಇಬ್ಬರು ಯುವಕರ ಸಾವು-ಕಹಳೆ ನ್ಯೂಸ್

ಉಡುಪಿ :ಉಡುಪಿಯ ಕಾರ್ಕಳದ ಮೀಯಾರು ಕಾಜರ ಬೈಲಿ ಎಂಬಲ್ಲಿ ಇಬ್ಬರು ಯುವಕರು ಹ್ಯಾಪಿ ನ್ಯೂ ಇಯರ್ ಎಂದು ರಸ್ತೆಯಲ್ಲಿ ಹೊಸ ವರ್ಷದ ಸಂದೇಶ ಬರೆಯುವಾಗ ವೇಗವಾಗಿ ಬಂದ ಈಕೋ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಬಾಗಲಕೋಟೆಯವರಾದ ಶರಣ್ ಮತ್ತು ಸಿದ್ದು ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ದಕ್ಷಿಣ ಕನ್ನಡಬಂಟ್ವಾಳ

ವಿಜಯೋತ್ಸವ ವೇಳೆ ವಾಹನ ಪಲ್ಟಿ ; ನರೇಶ್ ನೆಟ್ಲ‌‌ ಮೃತ್ಯು, ವಿಜೇತ ಅಭ್ಯರ್ಥಿಗಳಿಗೆ ಗಾಯ – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಬುಧವಾರ ನೆಟ್ಲದಲ್ಲಿ ನಡೆದಿದೆ. ನೆಟ್ಲ ನಿವಾಸಿ ನರೇಶ್(೩೦) ಮೃತ ವ್ಯಕ್ತಿ. ಘಟನೆಯಲ್ಲಿ ವಿಜೇತ ಅಭ್ಯರ್ಥಿ ದೀಪಕ್, ಜಗನ್ನಾಥ, ಗುರುವಪ್ಪ, ಸುಚಿತ್ರಾ, ನಳಿನಿ, ಯೋಗೀಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ನೆಟ್ಲ ಭಾಗದ ವಿಜಯೋತ್ಸವದ ವೇಳೆ ಘಟನೆ ನಡೆದಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
1 677 678 679 680 681 710
Page 679 of 710
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ