Saturday, April 12, 2025

ಜಿಲ್ಲೆ

ಮೈಸೂರು

ಚಾಮುಂಡಿ ಬೆಟ್ಟಕ್ಕೆ ಜನವರಿ 1ರಿಂದ ಭಕ್ತರಿಗೆ ಪ್ರವೇಶವಿಲ್ಲ-ಕಹಳೆ ನ್ಯೂಸ್

ಮೈಸೂರು: ಪ್ರತೀ ವರ್ಷ ಹೊಸವರ್ಷದ ದಿನ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ. ಆದರೆ ಈ ವರ್ಷ ಕೊರೊನಾ ಸಾಂಕ್ರಾಮಿಕದ ಭೀತಿಯಿರುವ ಕಾರಣ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದು, ಕಟ್ಟು ನಿಟ್ಟಾಗಿ ಕೊರೊನಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ...
ಕೊಡಗು

ಕೌಟುಂಬಿಕ ಕಲಹದಿಂದಾಗಿ ಮೂವರಿಗೆ ಚಾಕುವಿನಿಂದ ಚುಚ್ಚಿ ಆರೋಪಿ ಪರಾರಿ-ಕಹಳೆ ನ್ಯೂಸ್

ಕೊಡಗು: ಕೌಟುಂಬಿಕ ಕಲಹದಿಂದಾಗಿ ಮೂವರಿಗೆ ಚಾಕುವಿನಿಂದ ಚುಚ್ಚಿ ಆರೋಪಿ ಪರಾರಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದವರು ವಿಲ್ಸನ್(45), ಸ್ಟೀವನ್(28) ಮತ್ತು 17 ವರ್ಷದ ಯುವತಿ ಎಂದು ತಿಳಿದು ಬಂದಿದೆ. ಕುಟುಂಬದ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೆ ಏರಿದ ಬಳಿಕ, ರೊಚ್ಚಿಗೆದ್ದ ರಾಮ್‍ದಾಸ್ ಎಂಬಾತ ಮೂವರಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಮೊದಲು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದ್ದು...
ದಕ್ಷಿಣ ಕನ್ನಡಪುತ್ತೂರು

Breaking News : ಪುತ್ತೂರಿನ ಕೋರ್ಟು ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಹತ್ತಿದ BSNL  ನೌಕರ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವು ; ಕೇಬಲ್ ಸಂಸ್ಥೆಯ ಬೇಜವಾಬ್ದಾರಿತನದಿಂದ ಘಟನೆ, ವ್ಯಾಪಕ ಖಂಡನೆ – ಕಹಳೆ ನ್ಯೂಸ್

ಪುತ್ತೂರು : ನಗರದ ಕೋರ್ಟುರಸ್ತೆಯ ಮೀನಿನ ಮಾರುಕಟ್ಟೆ ಮುಂಭಾಗದಲ್ಲಿನ ವಿದ್ಯುತ್ ಕಂಬಕ್ಕೆ ಹತ್ತಿದ BSNL  ನೌಕರ ವಿದ್ಯುತ್ ಶಾಕ್ ಬಡಿದು ಮೃತ್ಯುವಾಗದ ಘಟನೆ ವರದಿಯಾಗಿದೆ. ಮೃತ ವ್ಯಕ್ತಿಯು ಆರ್ಲಪದವು ಮೂಲದ ಪದ್ಮನಾಭ ಪಾಣಾಜೆ ( 44 ) ಎಂದು ಗುರುತಿಸಲಾಗಿದ್ದು, ಬಿಎಸ್ಎನ್.ಎಲ್ ಗುತ್ತಿಗೆದಾರರಾದ ಶ್ರೀ ಅಸೋಸಿಯೇಟ್ಸ್ ನಲ್ಲಿ ಕಳೆದ ಮೂರು ವರ್ಷದಿಂದ ಕೆಲಸಮಾಡುತ್ತಿದ್ದು, ಕೆಲಸ ನಿರ್ವಹಿಸಿದ್ದ ವೇಳೆಯೇ ಘಟನೆ ಸಂಭವಿಸಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಆಳವಡಿಸಿಕೊಳ್ಳದೆ, ವಿದ್ಯುತ್ ಕಂಬಕ್ಕೆ ಹತ್ತಿದ್ದೇ...
ಉಡುಪಿ

ಉಡುಪಿಗೆ ಬ್ರಿಟನ್ ವೈರಸ್ ಭೀತಿ ಇಲ್ಲ; ಎಂಟು ಮಂದಿಯ ರಿಪೋರ್ಟ್ ನೆಗೆಟಿವ್- ಕಹಳೆ ನ್ಯೂಸ್

ಉಡುಪಿ:ಉಡುಪಿ ಜಿಲ್ಲೆಗೆ ಬ್ರಿಟನ್ ನಿಂದ ಎಂಟು ಮಂದಿ ಆಗಮಿಸಿದ್ದರಿಂದ ಉಡುಪಿಗೆ ಬ್ರಿಟನ್ ವೈರಸ್ ಭೀತಿ ಕಾಡಿತ್ತು. ಆದರೆ ಇದೀಗ ಆ ಎಂಟು ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇದರಿಂದ ಉಡುಪಿ ಜಿಲ್ಲೆಯ ಜನತೆಯ ಆತಂಕ ದೂರಾಗಿದೆ. ಇಂಗ್ಲೆಂಡ್ ನಿಂದ ಡಿಸೆಂಬರ್ 21 ರಂದು ಎಂಟು ಮಂದಿ ಜಿಲ್ಲೆಗೆ ಬಂದಿದ್ದರು. ಉಡುಪಿ ತಾಲೂಕಿನ ಮೂವರು, ಕಾರ್ಕಳ ತಾಲೂಕಿನ ನಾಲ್ವರು ಹಾಗೂ ಕುಂದಾಪುರ ತಾಲೂಕಿನ ಒಬ್ಬರು ಸೇರಿ ಒಟ್ಟು 8 ಮಂದಿ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಾಮಾಜಿಕ ಜಾಲತಾಣದ ಮೂಲಕ ಲವ್ ಜಿಹಾದ್ ಗೆ ಯತ್ನ ; ದೂರು ನೀಡಿದ ಕೆಲವೇ ಕ್ಷಣಗಳಲ್ಲಿ ಎಫ್.ಐ. ಆರ್ ದಾಖಲಿಸಿ ಆರೋಪಿ ಸೊಯೂಬ್ ಕೊತ್ವಾಲ್ ಫೀಸ್ ಕಟ್ ಮಾಡಿದ ಬೆಳ್ಳಾರೆ ಪೋಲೀಸ್ ಸಬ್ ಇನ್ಫೆಕ್ಟರ್ ಅಂಜನೇಯ ರೆಡ್ಡಿ..! – ಕಹಳೆ ನ್ಯೂಸ್

ಪುತ್ತೂರು :ಸಾಮಾಜಿಕ ಜಾಲತಾಣದ ಮೂಲಕ ಬಾಲಕಿಯೊಬ್ಬಳಿಗೆ ಪ್ರೀತಿಸುವಂತೆ ಹಾಗೂ ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇಲೆ ಯುವಕನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಡಬ ತಾಲೂಕಿನ ಸವಣೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಸೊಯೂಬ್ ಕೊತ್ವಾಲ್ ಎಂದು ಗುರುತಿಸಲಾಗಿದ್ದು, ಸವಣೂರಿನ‌ ನಿವಾಸಿಯಾಗಿರುವ ಪಿಯುಸಿ ಓದುತ್ತಿರುವ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿರುವ ಆರೋಪಿ ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ, ಅಲ್ಲದೇ ಅಸಭ್ಯವಾಗಿ ಸಂದೇಶ ರವಾನಿಸುತ್ತಿದ್ದ, ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎಂದು ಬಾಲಕಿ ಆರೋಪಿಸಿದ್ದಾಳೆ....
ಕಾಸರಗೋಡು

ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ 94 ಮಂದಿಯಲ್ಲಿ ಪತ್ತೆಯಾದ ಕೊರೊನಾ ಸೋಂಕು – ಕಹಳೆ ನ್ಯೂಸ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು, ರವಿವಾರದಂದು 94 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ನಡುವೆ 38 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು, 1004 ಮಂದಿ ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ.ಹಾಗೆ 6449 ಮಂದಿ ನಿಗಾದಲ್ಲಿದ್ದಾರೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕ್ಯಾನ್ಸ‌ರ್ ಚಿಕಿತ್ಸೆ ಬಳಿಕ ಕೇಶ ಕಳೆದು ಕೊಂಡವರಿಗೆ ” ಕೇಶದಾನ ” ; ‘ ಸೀಡ್ಸ್ ಆಫ್ ಹೋಪ್ ‘ ವಿದ್ಯಾರ್ಥಿ ತಂಡದ ಸಾರಥ್ಯದಲ್ಲಿ 67 ಮಂದಿಯಿಂದ ಕೇಶದಾನ – ಕಹಳೆ ನ್ಯೂಸ್

ಪುತ್ತೂರು: ಮಾರಕ ಕಾಯಿಲೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡ ಬಳಿಕ ಕೇಶನಷ್ಟದ ಸಂಕಷ್ಟವನ್ನು ಅನುಭವಿಸುತ್ತಿರುವ ರೋಗಿಗಳಿಗೆ ವಿಕ್‌ಮೂಲಕ ಕೇಶ ಕೊಡಿಸುವ ಪ್ರಯತ್ನಕ್ಕೆ ಸಂಬಂಧಿಸಿ ಪುತ್ತೂರಿನ ೯ ಮಂದಿ ‘ಸೀಡ್ಸ್ ಆಫ್ ಹೋಪ್’ ತಂಡದ ವಿದ್ಯಾರ್ಥಿಗಳ ತಂಡದ ಸಾರಥ್ಯದಲ್ಲಿ ಡಿ.೨೦ರಂದು ಮುಳಿಯ ಜೆಸಿಐ ಟ್ರೈನಿಂಗ್ ಹಾಲ್‌ನಲ್ಲಿ ಕೇಶ ದಾನ ಕಾರ್ಯಕ್ರಮ ನಡೆಯಿತು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ ಅವರ ಪರಿಕಲ್ಪನೆಯಲ್ಲಿ ಇಷಾ ಸುಲೋಚನಾ ಮುಳಿಯ, ವರ್ಷ ಭಟ್, ನೇಹಾ...
ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಸೌತಡ್ಕ ಮನೆ ಮಾಲಿಕನನ್ನು ಕಟ್ಟಿಹಾಕಿ ಭಾರೀ ಪ್ರಮಾಣದ‌ ಚಿನ್ನಾಭರಣ, ಹಣ ಲೂಟಿದ ದರೋಡೆಕೋರರು ; ಮನೆಯ ಮಹಿಳೆಗೆ ಚೂರಿಯಿಂದ ದಾಳಿ, ಮಹಿಳೆ ಗಂಭೀರ..! – ಕಹಳೆ ನ್ಯೂಸ್

ಬೆಳ್ತಂಗಡಿ : ತಾಲೂಕಿನ ಸೌತಡ್ಕದಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ತಂಡವೊಂದು ಮನೆ ಮಾಲಿಕನನ್ನು ಕಟ್ಟಿಹಾಕಿ ಭಾರೀ ದೊಡ್ಡ ಮಟ್ಟದಲ್ಲಿ ದರೋಡೆ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಪ್ರಸಿದ್ಧ ಸೌತಡ್ಕ ಮಹಾಗಣಪತಿ ದೇವಸ್ಥಾನದ ಸಮೀಪ ಮನೆಯೊಂದಕ್ಕೆ ನುಗ್ಗಿದ ಸುಮಾರು ಒಂಬತ್ತು ಜನರ ತಂಡವೊಂದು ಮನೆ ಮಾಲಿಕನನ್ನು ಕಟ್ಟಿ ಹಾಕಿ, ‌ಮನೆಯ ಮಹಿಳೆಯ ಮೇಲೆ ಚೂರಿಯಿಂದ ದಾಳಿ ಮಾಡಿ, ನಂತರ ಅಪಾರ ಪ್ರಮಾಣದ ಚಿನ್ನಾಭರಣ,...
1 678 679 680 681 682 710
Page 680 of 710
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ