ಪ್ಯೂರ್ ಪ್ರೇಯರ್ ಸಂಸ್ಥೆ ಅವ್ಯವಹಾರ ನಡೆಸಿದೆ ಎನ್ನುವ ವಿಚಾರ ; ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನ್‍ಲೈನ್ ಸೇವೆಗಳ ನಿರ್ವಹಣೆ ಫ್ಯೂರ್ ಪ್ರೇಯರ್ ಸಂಸ್ಥೆಗಿಲ್ಲ – ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ – ಕಹಳೆ ನ್ಯೂಸ್
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಆನ್‍ಲೈನ್ ಸೇವೆಗಳ ನಿರ್ವಹಣೆಯಿಂದ ಪ್ಯೂರ್ ಪ್ರೇಯರ್ ಸಂಸ್ಥೆಯನ್ನು ಮುಕ್ತಗೊಳಿಸಲಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಾನು ಮುಜರಾಯಿ ಸಚಿವನಾಗಿ ಆಯ್ಕೆಯಾಗುವ ಮೊದಲೇ ರಾಜ್ಯದ 54 ದೇವಸ್ಥಾನಗಳ ಸೇವೆಯನ್ನು ಆನ್ ಲೈನ್ ಮೂಲಕ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕಾಗಿ ಸರ್ವೆಯನ್ನೂ ನಡೆಸಲಾಗಿದ್ದು, ಪ್ಯೂರ್ ಪ್ರೇಯರ್ ಸಂಸ್ಥೆಗೆ 15 ಜಿಲ್ಲೆಗಳ ದೇವಸ್ಥಾನಗಳನ್ನು ಬಿಟ್ಟುಕೊಡಲಾಗಿತ್ತು. ಉಳಿದ ಜಿಲ್ಲೆಗಳ ಸರ್ವೇ ಕಾರ್ಯವನ್ನು ಇನ್ನಷ್ಟೇ ಮಾಡಬೇಕಿದೆ. ಈ ನಡುವೆ...