ಅನಿರ್ವೇದ ಸಂಸ್ಥೆಯಿಂದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ʻನೆರವಿನ ಶನಿವಾರʼ ಉಪಕ್ರಮಕ್ಕೆ ಚಾಲನೆ- ಕಹಳೆ ನ್ಯೂಸ್
ಮಂಗಳೂರು: ನಗರದ ಮಾನಸಿಕ ಯೋಗಕ್ಷೇಮ ಸಂಪನ್ಮೂಲ ಕೇಂದ್ರ ಹಾಗೂ ಸರ್ಕಾರೇತರ ಸಂಸ್ಥೆ ಎನಿಸಿರುವ ʻಅನಿರ್ವೇದʼವು ನಗರದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ಉಚಿತ ಮತ್ತು ಅಂತರ್ಗತ ʻನೆರವಿನ ಶನಿವಾರʼ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ. ಇಫ್ತಿಕಾರ್ ಆಲಿ, ಅಧ್ಯಕ್ಷರು, ಕರ್ನಾಟಕದ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್, ಇವರು ಮಂಗಳವಾರ ಸಂಜೆ ನಗರದಲ್ಲಿ ಅನಿರ್ವೇದದ ವಿಶೇಷ ಅಗತ್ಯತೆಯ ಮಕ್ಕಳ ಕೆಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಷ್ಠಾನದ ನಿರ್ದೇಶಕರಾದ ಡಾ....