ಶ್ರಾವಣ ಹುಣ್ಣಿಮೆಯಲ್ಲಿ ಸೂಪರ್ ಮೂನ್‌ಗಳ ವೈಭವ…!- ಕಹಳೆ ನ್ಯೂಸ್
ಇಂದು ಸೋಮವಾರ ಶ್ರಾವಣ ನಕ್ಷತ್ರದಲ್ಲಿ ನೋಡುವುದಾದರೆ ಅದು ಹುಣ್ಣಿಮೆ. ಈ ದಿನ ಸೂಪರ್ ಮೂನ್. ಈ ಹುಣ್ಣಿಮೆಯಿಂದ ಮುಂದಿನ ಭಾದ್ರಪದ, ಆಶ್ವೀಜ, ಹಾಗೂ ಕಾರ್ತೀಕಗಳ ನಾಲ್ಕು ಹುಣ್ಣಿಮೆಗಳೂ ಸೂಪರ್ಮೂನ್‌ಗಳೇ. ಸೂಪರ್ಮೂನ್ ಎಂದರೆ ಹುಣ್ಣಿಮೆಯಂದು ಚಂದ್ರ ಭೂಮಿಗೆ ಸುಮಾರು ಮೂವತ್ತು ಸಾವಿರ ಕಿಮೀ ಸಮೀಪ ಬರುವುದು. ಭೂಮಿಯಿಂದ ಸರಾಸರಿ 3ಲಕ್ಷದ 84 ಸಾವಿರ ಕಿಮೀ ದೂರದಲ್ಲಿ ದೀರ್ಘವೃತ್ತಕಾರದಲ್ಲಿ ಸುತ್ತುವ ಚಂದ್ರ, 28 ದಿನಗಳಿಗೊಮ್ಮೆ 3 ಲಕ್ಷದ 56 ಸಾವಿರದವರೆಗೂ ಹತ್ತಿರ ಬರುವುದುಂಟು....