ಉಡುಪಿ ಪತ್ರಿಕಾ ಭವನ ಪರಿಸರದಲ್ಲಿ ಪತ್ರಕರ್ತರಿಂದ ಡೆಂಗ್ಯು ಬಗ್ಗೆ ಜಾಗೃತಿ, ಲಾರ್ವ ಸಮೀಕ್ಷೆ -ಕಹಳೆ ನ್ಯೂಸ್
ಉಡುಪಿ : ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಡೆಂಗ್ಯು ರೋಗ ಹರಡುವ ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನದ ಪ್ರಯುಕ್ತ ಶುಕ್ರವಾರ ಉಡುಪಿ ಪತ್ರಿಕಾ ಭವನದ ಪರಿಸರದಲ್ಲಿ ಪತ್ರಕರ್ತರು ಲಾರ್ವ ಸಮೀಕ್ಷೆ ನಡೆಸಿ, ಲಾರ್ವಗಳನ್ನು ನಾಶ ಪಡಿಸಿ, ಸಾರ್ವಜನಿಕರಿಗೆ ಕರಪತ್ರಪ ವಿತರಿಸಿ ಡೆಂಗ್ಯು ಕಾಯಿಲೆ ಕುರಿತು ಅರಿವು ಮೂಡಿಸಲಾಯಿತು. ಉಡುಪಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಣಾಧಿಕಾರಿ ಡಾ. ಪ್ರಶಾಂತ್ ಭಟ್ ನೇತೃತ್ವದಲ್ಲಿ...