ಹೈನುಗಾರರ ರೂ. 1100 ಕೋಟಿ ಪ್ರೋತ್ಸಾಹ ಧನ ಶೀಘ್ರ ಬಿಡುಗಡೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಪತ್ರ– ಕಹಳೆ ನ್ಯೂಸ್
ಕಳೆದ 8 ತಿಂಗಳಿಂದ ರಾಜ್ಯದ ಹೈನುಗಾರರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಗೆ ಬಾಕಿ ಇರುವ ಸುಮಾರು 1100 ಕೋಟಿ ಪ್ರೋತ್ಸಾಹ ಧನವನ್ನು ತಕ್ಷಣ ಏಕ ಕಂತಿನಲ್ಲಿ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯ ಮಂತಿ ಸಿದ್ದರಾಮಯ್ಯ ರವರಿಗೆ ಪತ್ರ ಬರೆದು ಅಗ್ರಹಿಸಿದ್ದಾರೆ. ರಾಷ್ಟದಲ್ಲಿ ಎರಡನೇ ಅತೀ ದೊಡ್ಡ ಹಾಲು ಮಂಡಳವಾಗಿ ಕರ್ನಾಟಕ ಹಾಲು ಮಹಾ ಮಂಡಳ ಮೂಡಿ ಬಂದಿದ್ದು, ಇದರ ಆಶ್ರಯದಲ್ಲಿ 15 ಒಕ್ಕೂಟಗಳು ಕಾರ್ಯಾಚರಿಸುತ್ತಿದೆ. ಈ...