ರಾಡ್ ಹಿಡಿದು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿದ ವಿಶುಶೆಟ್ಟಿ ಅಂಬಲಪಾಡಿ –ಕಹಳೆ ನ್ಯೂಸ್
ಉಡುಪಿ, ಜೂ.1: ಪೆರ್ಡೂರಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ದಿನಗಳಿಂದ ಕಬ್ಬಿಣದ ರಾಡ್ ಹಿಡಿದು ತಿರುಗಾಡುತ್ತಿದ್ದು ಆತಂಕ ಸೃಷ್ಟಿಸಿದ ವ್ಯಕ್ತಿಯನ್ನು ವಿಶು ಶೆಟ್ಟಿ, ಸ್ಥಳೀಯರಾದ ಸತೀಶ್ ಆಚಾರ್ಯರವರ ಸಹಾಯದಿಂದ ವಶಕ್ಕೆ ಪಡೆದು ಹಿರಿಯಡ್ಕ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ, ಮಂಜೇಶ್ವರದ ದೈಗೋಳಿಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಶ್ರೀ ಸಾಯಿ ನಿಕೇತನದಲ್ಲಿ ದಾಖಲಿಸಿದ ಘಟನೆ ಮೇ 31 ರಂದು ನಡೆದಿದೆ. ವ್ಯಕ್ತಿಯ ಹೆಸರು ನಂದ (48 ವ) ಎಂದಷ್ಟೇ ಮಾಹಿತಿ ನೀಡಿದ್ದಾರೆ....