ಫಾರೆನ್ಸಿಕ್ -ಡಿಎನ್‌ಎ ಪರೀಕ್ಷೆಗಳ ಮಹತ್ವ ಕುರಿತ ವಿಚಾರ ಸಂಕಿರಣ: ಅಪರಾಧ ಪ್ರಕರಣ ಬೇಧಿಸುವಲ್ಲಿ ಫಾರೆನ್ಸಿಕ್ ಸೈನ್ಸ್ ಪಾತ್ರ ಪ್ರಮುಖ: ಡಾ.ವಿನೋದ್ ನಾಯಕ್ -ಕಹಳೆ ನ್ಯೂಸ್
ಉಡುಪಿ: ಅಪರಾಧ ಕೃತ್ಯಗಳಲ್ಲಿ ಫಾರೆನ್ಸಿಕ್ ಸೈನ್ಸ್(ವಿಧಿ ವಿಜ್ಞಾನ) ನ್ಯಾಯ ಒದಗಿಸಿ ಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಡಿಎನ್‌ಎ, ಬೆರಳಚ್ಚು ಸೇರಿದಂತೆ ಹಲವು ಸಾಕ್ಷಗಳಿಂದ ಅಪರಾಧ ಪ್ರಕರಣವನ್ನು ಬೇಧಿಸಿ ಅಪರಾಧಿ ಗಳಿಗೆ ಶಿಕ್ಷೆ ಕೊಡಿಸುವಲ್ಲಿ ಫಾರೆನ್ಸಿಕ್ ಸೈನ್ಸ್ ಸಾಕಷ್ಟು ನೆರವಾಗುತ್ತದೆ ಎಂದು ಮಣಿಪಾಲ ಕೆಎಂಸಿಯ ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕೋಲಜಿ ವಿಭಾಗದ ಪ್ರಾಧ್ಯಾಪಕ ಡಾ.ವಿನೋದ್ ನಾಯಕ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ...