ರಾಜಕೀಯ ಹಿನ್ನೆಲೆ ಉಳ್ಳವರು ಸ್ಪರ್ಧಿಸಿ ಗೆದ್ದು ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಮಲೀನಗೊಳಿಸಿದ್ದಾರೆ: ಡಾ.ಅರುಣ್ ಹೊಸಕೊಪ್ಪ ಆರೋಪ- ಕಹಳೆ ನ್ಯೂಸ್
ಉಡುಪಿ : ಕಳೆದ ಬಾರಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವವರು ರಾಜಕೀಯ ಹಿನ್ನೆಲೆ ಉಳ್ಳವರು. ಅವರು ಈ ಕ್ಷೇತ್ರವನ್ನು ಮಲೀನಗೊಳಿಸಿದ್ದೂ ಅಲ್ಲದೇ, ಶಿಕ್ಷಕರಿಗೆ ಪಾರ್ಟಿಗಳನ್ನು, ಉಡುಗೊರೆಗಳನ್ನು ನೀಡಿ, ಹಣ ಹಂಚಿ ಪ್ರಜ್ಞಾವಂತ ಮತದಾರರನ್ನು ಭ್ರಷ್ಟಗೊಳಿಸಿದ್ದಾರೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ಅರುಣ್ ಹೊಸಕೊಪ್ಪ ಆರೋಪಿಸಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರನ್ನು ಪ್ರತಿನಿಧಿಸಲು ಸ್ಪರ್ಧಿಸುವವರಿಗೂ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ಅನುಭವ ಇರಬೇಕು. ನಾನು ಇತಿಹಾಸ...