ತಪ್ಪಿಸಿದ ರಾಹುಕಾಲ ಅವರಿಗೆ ಮಾತ್ರ, ರಾಜ್ಯಕ್ಕೆ ರಾಹುಕಾಲ ಅಂಟಿದ್ದು ಗ್ಯಾರೆಂಟಿ – ಶ್ರೀನಿಧಿ ಹೆಗ್ಡೆ-ಕಹಳೆ ನ್ಯೂಸ್
ಉಡುಪಿ: ರಾಹುಕಾಲ ಎಂಬ ಕಾರಣಕ್ಕೆ ನಿಗದಿತ ಸಮಯಕ್ಕಿಂತ 45 ನಿಮಿಷ ಬೇಗ ಬಜೆಟ್ ಆರಂಭಿಸಿದ ಸಿಎಂ, ರಾಜ್ಯದ ಹಿಂದೂಗಳಿಗೆ ಮರಾಮೋಸ ಮಾಡಿದ್ದಲ್ಲದೇ ಉಡುಪಿ ಜಿಲ್ಲೆಗೂ ಯಾವ ಯೋಜನೆಗಳನ್ನು ಘೋಷಿಸಿಲ್ಲ ಎಂದು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಹಾಗು ಹೈಕೋರ್ಟ್ ನ್ಯಾಯವಾದಿ ಶ್ರೀನಿಧಿ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಆರ್ಥಿಕತೆಗೆ ಅತೀ ಅಮೂಲ್ಯ ಕೊಡುಗೆ ನೀಡುವ ಕರಾವಳಿ ಜಿಲ್ಲೆಯ ಮೀನುಗಾರಿಕೆ ಹಾಗೂ ಬಂದರು ಅಭಿವೃದ್ಧಿಗೆ ಯಾವುದೇ ಅನುದಾನ ನೀಡದೆ, ಉಡುಪಿ...