ಮಲ್ಪೆ: ಒಮಾನ್ ದೇಶದ ಮೀನುಗಾರಿಕಾ ಬೋಟ್ ವಶಕ್ಕೆ-ಕಹಳೆ ನ್ಯೂಸ್
ಉಡುಪಿ: ಮಲ್ಪೆ ಸೇಂಟ್ ಮೇರಿಸ್ ದ್ವೀಪದ ಬಳಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಒಮಾನ್ ದೇಶದ ಮೀನುಗಾರಿಕಾ ಬೋಟೊಂದನ್ನು ಕರಾವಳಿ ಕಾವಲು ಪೊಲೀಸ್ (ಸಿಎಸ್‌ಪಿ) ಹಾಗೂ ಮಂಗಳೂರಿನ ಕೋಸ್ಟ್ ಗಾರ್ಡ್ ವಶಕ್ಕೆ ಪಡೆದಿದ್ದು, ಅದರಲ್ಲಿದ್ದ ಮೂವರನ್ನು ಬಂಧಿಸಲಾಗಿದೆ. ತಮಿಳುನಾಡಿನ ಜೇಮ್ಸ್ ಫ್ರಾಂಕ್ಲಿನ್ ಮೋಸೆಸ್ (50), ರಾಬಿನ್ ಸ್ಟನ್ (50) ಹಾಗೂ ಡೆರೋಸ್ ಅಲ್ಫೋನ್ಸ್ (38) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಫೆ. 17ರಂದು ಒಮಾನ್‌ನ...