ಉಡುಪಿ-ಪ್ರಯಾಗರಾಜ್ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ–ಕಹಳೆ ನ್ಯೂಸ್
ಉಡುಪಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಲು ಕರಾವಳಿಗರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿರುವ ವಿಶೇಷ ರೈಲು ಸೇವೆಗೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು. ಯಾತ್ರಾರ್ಥಿಗಳು ಸಾವಧಾನದಿಂದ ಪುಣ್ಯಸ್ನಾನ ಮಾಡಿ ಎಂದು ಕಿವಿಮಾತು ಹೇಳಿದ ಅವರು, ಭರತಭೂಮಿ ಪವಿತ್ರ ಕ್ಷೇತ್ರ. ಉಡುಪಿ ಕೂಡ ತೀರ್ಥಕ್ಷೇತ್ರ. ಮಧ್ವಾಚಾರ್ಯರು ದ್ವಾರಕೆಯಿಂದ ಶ್ರೀಕೃಷ್ಣನನ್ನು ತಂದು ಪ್ರತಿಷ್ಠಾಪನೆ ಮಾಡಿದ್ದಾರೆ. ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿನ ಮಧcಸರೋವರಕ್ಕೆ ಗಂಗೆ...