ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಲ್ಲವ ಮುಖಂಡ ಪದ್ಮರಾಜ್ ಆರ್‌ಗೆ ಅದೃಷ್ಟ ; ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ..! ಜೆ.ಆರ್.ಲೋಬೋ, ಐವನ್ ಡಿ’ಸೋಜಾಗೆ ಕೈ ತಪ್ಪಿದ ಅವಕಾಶ..!? – ಕಹಳೆ ನ್ಯೂಸ್
ಮಂಗಳೂರು/ಉಡುಪಿ: ದ.ಕ. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿನ ಆಕಾಂಕ್ಷಿಗಳು ತಮ್ಮೆಲ್ಲ ಪಟ್ಟುಗಳನ್ನೂ ಪ್ರಯೋಗಿಸುತ್ತಿದ್ದು ಉನ್ನತ ನಾಯಕರು ದಿಲ್ಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಆಕಾಂಕ್ಷಿಗಳಾದ ಮೊದಿನ್ ಬಾವಾ, ಐವನ್ ಡಿ’ಸೋಜಾ, ಪದ್ಮರಾಜ್ ಆರ್. ಮುಂತಾದವರು ದಿಲ್ಲಿಯಲ್ಲೇ ಪ್ರಯತ್ನಶೀಲರಾಗಿದ್ದಾರೆ. ಆದರೂ ಹೈಕಮಾಂಡ್ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಪದ್ಮರಾಜ್ ಆರ್‌ಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ : ಒಂದೆಡೆ ಮಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಹೆಚ್ಚಿರುವ ಪೈಪೋಟಿ ಇನ್ನೊಂದೆಡೆ...